Untitled Document
Sign Up | Login    
Dynamic website and Portals
  
February 28, 2015

2015-16ನೇ ಸಾಲಿನ ಕೇಂದ್ರ ಬಜೆಟ್

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ : ಕೇಂದ್ರ ಎನ್.ಡಿ.ಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು.

ದೇಶದ ಬಡತನ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ದೇಶದ ಆರ್ಥಿಕ ವಾತಾವರಣಕ್ಕೆ ಅನುಕೂಲಕರವಾದ ಬಜೆಟ್ ಇದಾಗಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳಾಗಿದ್ದು, ಕಳೆದ 9 ತಿಂಗಳಲ್ಲಿ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ ಎಂದು ಜೇಟ್ಲಿ ತಿಳಿಸಿದರು.

ಬಜೆಟ್ ದೇಶದ ಅಭಿವೃದ್ಧಿಯ ದಾರಿ ರೂಪಿಸುತ್ತದೆ. ಇಡೀ ವಿಶ್ವದಿಂದ ಭಾರತದ ಪ್ರಗತಿಗೆ ವಿಶ್ವಾಸ ವ್ಯಕ್ತವಾಗಿದೆ. ಜಾಗತಿಕ ಹೂಡಿಕೆದಾರರಿಗೆ ಭಾರತದ ಮೇಲೆ ನಂಬಿಕೆ ಬಂದಿದೆ. ಜನಸಾಮಾನ್ಯರ ಜೀವನದ ಉನ್ನತೀಕರಣಕ್ಕೆ ಕ್ರಮಕೈಗೊಳ್ಳಲಾಗಿದ್ದು, ಸ್ವಚ್ಛ ಭಾರತ ಅಭಿಯಾನವನ್ನು ನಾವು ಆಂದೋಲನ ಮಾಡಿದ್ದೇವೆ ಎಂದರು.

ಸ್ವಚ್ಛ ಭಾರತ ಆಂದೋಲನದಡಿ 6 ಕೋಟಿ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಈಗಾಗಲೇ 2೦ ಸಾವಿರ ಶೌಚಾಲಯ ನಿರ್ಮಾಣವಾಗಿದೆ. ಯುವಕರಿಗೆ ಉದ್ಯೋಗ ಸೃಷ್ಠಿ. ಕೃಷಿ ಯುವಕರ ಸ್ಕಿಲ್ ಹೆಚ್ಚಿಸುವುದರತ್ತ ಕ್ರಮ ಕೈಗೊಳ್ಳಲಾಗಿದೆ. ದೇಶದ ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲು ಸರ್ಕಾರ ಬಯಸುತ್ತದೆ. ನಮ್ಮ ಸರ್ಕಾರದ 3 ಸಾಧನೆ ಹೇಳಲು ಬಯಸುತ್ತೇನೆ ಎಂದ ಜೇಟ್ಲಿ, ಜನ-ಧನ ಯೋಜನೆ ಯಶಸ್ಸು, ಕಲ್ಲಿದ್ದಲು ಹರಾಜು, ಸ್ವಚ್ಛ ಭಾರತ ಸರ್ಕಾರದ ಸಾಧನೆಗಳಾಗಿವೆ ಎಂದು ಹೇಳಿದರು.

ಈ ವರ್ಷ ನಾವು ಆರ್ ಬಿಐ ಕಾಯ್ದೆ ಬದಲಾಯಿ ಸಲಿದ್ದೇವೆ. 2022 ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷ. ಈ ಹಿನ್ನಲೆಯಲ್ಲಿ ಕನಿಷ್ಠ 2 ಕೋಟಿ ಗೃಹ ನಿರ್ಮಾಣ ಯೋಜನೆ ಹಾಕಿಕೊಂಡಿದ್ದೇವೆ. 2020ರ ವೇಳೆಗೆ ವಿದ್ಯುತ್ ಇಲ್ಲದ 2೦ ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಕೆಮಾಡಲಾಗುವುದು. 75 ಸಾವಿರ ಪ್ರಾಥಮಿಕ ಶಿಕ್ಷಣವನ್ನು ಮಾಧ್ಯಮಿಕ ಶಿಕ್ಷಣ ಕೇಂದ್ರಗಳನ್ನಾಗಿ ಅಪ್ ಗ್ರೇಡ್ ಮಾಡಬೇಕಿದೆ ಎಂದು ವಿವರಿಸಿದರು.

ದೇಶದ ಮುಂದೆ 4 ಪ್ರಮುಖ ಸವಾಲುಗಳಿವೆ-. ಕೃಷಿ ಆರ್ಥಿಕತೆ, ಸಾರ್ವಜನಿಕರಿಂದ ಹೂಡಿಕೆ, ಉತ್ಪಾದನೆಗೆ ಒತ್ತು, ಉದ್ಯೋಗ ಸೃಷ್ಠಿಗೆ ಆದ್ಯತೆ. ಸಾರ್ವಜನಿಕ ಹೂಡಿಕೆಗೆ ಯೋಜನೆ ರೂಪಿಸಲಾಗಿದ್ದು, ಸಾರ್ವಜನಿಕ ಹೂಡಿಕೆಯಿಂದ 1.5ಲಕ್ಷ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

ಬಜೆಟ್‌ ಮುಖ್ಯಾಂಶಗಳು:
* 80,000 ಸೆಂಕಡರಿ ಶಾಲೆಗಳ ಉನ್ನತೀಕರಣ
* ಹೊಸ ರಸ್ತೆಗಳ ನಿರ್ಮಾಣದಂಗವಾಗಿ 1 ಲಕ್ಷ ಕಿ.ಮೀ. ರಸ್ತೆಗಳ ಘೋಷಣೆ
* ಆರ್‌.ಬಿ.ಐ. ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಹಣಕಾಸು ನೀತಿ ನಿರೂಪಣಾ ಸಮಿತಿ ರೂಪಣೆ - ಎರಡಂಕಿಯ ಬೆಳವಣಿಗೆ ಸಾಧ್ಯತೆ.
* ಸಬ್ಸಿಡಿಗೆ ಅಂತ್ಯ ಹೇಳುವ ಪ್ರಶ್ನೆಯೇ ಇಲ್ಲ. ಆದರೆ ಸಬ್ಸಿಡಿಯಲ್ಲಿನ ಸೋರಿಕೆ ತಡೆಯಲು ಬದ್ಧ
* ಲೋಕಸಭಾ ಸದಸ್ಯರು ಸಬ್ಸಿಡಿ ರಹಿತ ಎಲ್ ಪಿಜಿ ಪಡೆಯಲು ಮನವಿ
* 5,300 ಕೋಟಿ ರೂ. ಸಣ್ಣ ನೀರಾವರಿ ಯೋಜನೆಗೆ
* 2015-16ನೇ ಸಾಲಿನಲ್ಲಿ ಜಿಡಿಪಿ ಶೇ.8ರಿಂದ 8.5ಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ. ನರೇಗಾ, ಶಿಕ್ಷಣ ಸೌಲಭ್ಯ, ಬಡತನ ನಿರ್ಮೂಲನಾ ಯೋಜನೆಗಳನ್ನು ಸರ್ಕಾರ ಮುಂದುವರಿಸಲಿದೆ
* ದೇಶದ ಪ್ರತಿ ಕುಟುಂಬಕ್ಕೂ ಸೂರು
* 24 ತಾಸು ವಿದ್ಯುತ್, ರಸ್ತೆ ಸೌಲಭ್ಯ
* ಸ್ವಚ್ಚ ಭಾರತ ಯೋಜನೆ ಮೂಲಕ ಹೊಸ ಬೆಳವಣಿಗೆ
* ಹಣದುಬ್ಬರವನ್ನು ಶೇ.6ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ
* ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಠಿ
* ಗೇಮ್ ಚೇಂಜಿಂಗ್ ಯೋಜನೆಗಳ ಗುರಿ ಹೊಂದಿದ್ದೇವೆ
* ಎಲ್ಲಾ ಯೋಜನೆಗಳಿಗೂ ಜಾಮ್ ಆಧಾರಿತ ಸಂವಹನ ಅಳವಡಿಸಲಾಗುವುದು ಜಾಮ್- ಜನಧನ್, ಆಧಾರ್, ಮೊಬೈಲ್ ಸಂವಹನ
* ಬಿಹಾದದಲ್ಲಿ ಮತ್ತೊಂದು ಏಮ್ಸ್ ಸ್ಥಾಪನೆ
* ಕರ್ನಾಟಕದಲ್ಲಿ ಐಐಟಿ ಸ್ಥಾಪನೆ
* ವಿದ್ಯುತ್ ಚಾಲಿತ ವಾಹನಗಳ ಹೆಚ್ಚಳ
* ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಜಾರಿ
* ವೀಸಾ ಆನ್ ಅರೈವಲ್ -ವಿವಿಧ ಹಂತಗಳಲ್ಲಿ 150 ದೇಶಗಳಿಗೆ ವಿಸ್ತರಣೆ
* 25 ವಿಶ್ವ ಹೆರಿಟೇಜ್ ವೆಬ್ ಸೈಟ್ ಅಭಿವೃದ್ಧಿ
* ದೇಶದೆಲ್ಲೆಡೆ ಪ್ರವಾಸೋದ್ಯಮ ಅಭಿವೃದ್ದಿಗೆ ಕ್ರಮ
* ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಮೆಟಲ್ ಅಕೌಂಟ್ ತೆರೆಯಲಾಗುವುದು
* ಅಶೋಕ ಚಕ್ರ ರೂಪವುಳ್ಳ ಚಿನ್ನದ ನಾಣ್ಯ ಬಿಡುಗಡೆ
* ನಿರ್ಭಯಾ ಫಂಡ್ ಗೆ 1000 ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ
* ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ-
2.5 ಲಕ್ಷದವರೆಗೆ ಟ್ಯಾಕ್ಸ್- ಇಲ್ಲ
2.5ರಿಂದ 5 ಲಕ್ಷದವರೆಗೆ- 10%
5ರಿಂದ 10 ಲಕ್ಷದವರೆಗೆ- 20%
10 ಲಕ್ಷ ಮೇಲ್ಪಟ್ಟು- 30%
* ಕಾರ್ಪೋರೆಟ್ ತೆರಿಗೆ ಶೇ.30ರಿಂದ ಶೇ.25ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆ ಇಳಿಕೆ
* ತೆರಿಗೆ ಕಳ್ಳರಿಗೆ 10 ವರ್ಷಗಳ ಕಾಲ ಜೈಲುಶಿಕ್ಷೆ. ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷ ಶಿಕ್ಷೆ
* ಕಪ್ಟು ಹಣಕ್ಕೆ ಕಡಿವಾಣ, ಆದಾಯ ಉತ್ತೇಜಿಸುವ ಗುರಿ ಹೊಂದಿದ್ದೇವೆ. ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ ಮಂಡಿಸುತ್ತೇವೆ.
* ಪ್ರಸಕ್ತ ಸಾಲಿನ ಯೋಜನಾ ವೆಚ್ಚ 17, 77,047 ಕೋಟಿ ರೂಪಾಯಿ.ಈ ವರ್ಷದ ತೆರಿಗೆ ಸಂಗ್ರಹ ಗುರಿ 14,49,490
* ರಕ್ಷಣಾ ಕ್ಷೇತ್ರಕ್ಕೆ 2,46,727 ಕೋಟಿ ರೂಪಾಯಿ ಮೀಸಲು
* ಬಿಹಾರ ಹಾಗೂ ಪಶ್ಚಿಮ ಬಂಗಾಲ ರಾಜ್ಯಗಳಿಗೆ ವಿಶೇಷ ನೆರವು.
* ಅಮೃತಸರದಲ್ಲಿ ತೋಟಗಾರಿಕಾ ವಿವಿ ಸ್ಥಾಪನೆ
* ಶಿಕ್ಷಣ ಕ್ಷೇತ್ರಕ್ಕೆ 68,000 ಕೋಟಿ ರೂಪಾಯಿ ಮೀಸಲು
* ಅರುಣಾಚಲ ಪ್ರದೇಶದಲ್ಲಿ ಫಿಲ್ಮ್ ಸ್ಕೂಲ್ ಸ್ಥಾಪನೆ
* ಕರ್ನಾಟಕದ ಹಂಪಿ, ಮಹಾರಾಷ್ಟ್ರದ ಎಲಿಫಂಟಾ ಗುಹೆ, ಗೋವಾದ ಚರ್ಚ್. ಪಂಜಾಬ್ ನ ಐತಿಹಾಸಿಕ ಜಲಿಯನ್ ವಾಲಾಭಾಗ್ ತಾಣಗಳು ವಿಶ್ವಪಾರಂಪರಿಕ ಪಟ್ಟಿಯಲ್ಲಿ
* ರೆಗ್ಯುಲೇಟರಿ ರಿಫಾರ್ಮ್ ಕಾನೂನು ಜಾರಿ
* ಮಧ್ಯಾಹ್ನದ ಬಿಸಯೂಟ ಯೋಜನೆಗೆ 69 ಸಾವಿರ ಕೋಟಿ ರೂಪಾಯಿ ಮೀಸಲು

ಬೆಲೆ ಏರಿಕೆ:
ತಂಬಾಕು, ಸಿಗರೇಟು,
ಮೊಬೈಲ್ ಫೋನ್
ಹೋಟೆಲ್ ಆಹಾರ,
ಕಂಪ್ಯೂಟರ್ ,ಲ್ಪಾಪ್ ಟಾಪ್,
ಪಾನ್ ಮಸಾಲಾ,
ಬ್ಯೂಟಿ ಪಾರ್ಲರ್,
ಶಿಕ್ಷಣ ಶುಲ್ಕ
ಜಿಮ್ ಮತ್ತು ಕ್ಲಬ್ ಮೆಂಬರ್ ಶಿಪ್
ಹೋಟೆಲ್ ವಾಸ್ತವ್ಯ
ಕೇಬಲ್ ಟಿವಿ
ರೆಫ್ರೀಜರೇಟರ್
ಕೊರಿಯರ್ ಸೇವೆ
ಫೋನ್ ಬಿಲ್
ಆನ್ ಲೈನ್ ಏರ್ ಟಿಕೆಟ್ ಬುಕ್ಕಿಂಗ್
ಮನೆ ಖರೀದಿ,
ವೈ ಫೈ
ಬಲ್ಭ್

ಬೆಲೆ ಇಳಿಕೆ :
1000 ರೂ. ಮೇಲ್ಪಟ್ಟ ಚರ್ಮದ ಪಾದರಕ್ಷೆ
ಹಣ್ಣು ತರಕಾರಿಗಳಿಗೆ ಸೇವಾ ತೆರಿಗೆ ಇಲ್ಲ
ತಂಪು ಪಾನೀಯ
ಎಲ್ ಇಡಿ, ಎಲ್ ಸಿಡಿ ಟೀವಿ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited