Untitled Document
Sign Up | Login    
Dynamic website and Portals
  
February 28, 2015

ಜಮ್ಮು-ಕಾಶ್ಮೀರ: ಮುಫ್ತಿ ಸಂಪುಟದಲ್ಲಿ ಪಿಡಿಪಿ, ಬಿಜೆಪಿಗೆ ತಲಾ 12 ಸಚಿವ ಸ್ಥಾನ

ಶ್ರೀನಗರ : ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡು 2 ತಿಂಗಳ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಕ್ಷಣಗಣನೆ ಆರಂಭವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಪಿಡಿಪಿ ನಾಯಕ ಮುಫ್ತಿ ಮಹಮ್ಮದ್‌ ಸಯೀದ್‌ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಫ್ತಿ ಅವರ ಸಚಿವ ಸಂಪುಟ 25 ಸಚಿವರನ್ನು ಒಳಗೊಂಡಿರಲಿದ್ದು, ಇದರಲ್ಲಿ ಉಭಯ ಪಕ್ಷಗಳಿಗೆ ತಲಾ 12 ಸ್ಥಾನ ಮೀಸಲಿರಲಿದೆ. ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ಒಲಿದಿದೆ.

ಭಾನುವಾರ ಶ್ರೀನಗರದ ಝೋರಾರ್ ಆಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎನ್‌.ಎನ್‌.ವೋಹ್ರಾ ಅವರು ಮುಫ್ತಿ ಮಹಮ್ಮದ್‌ ಸಯೀದ್‌ ಮತ್ತು ಅವರ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited