Untitled Document
Sign Up | Login    
Dynamic website and Portals
  
February 26, 2015

ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ: ಅಬಕಾರಿ ಖಾತೆ ವಾಪಸ್

ಸತೀಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ

ಬೆಂಗಳೂರು : ಖಾತೆ ಬದಲಾವಣೆ ಬಯಸಿ ರಾಜೀನಾಮೆ ನೀಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾತೆ ಬದಲಾವಣೆ ಮಾಡಿದ್ದು, ಹಿಂದಿನ ಖಾತೆ ವಾಪಸ್ ಪಡೆದಿದ್ದಾರೆ.

ಈ ಸಂಬಂಧ ತಮ್ಮ ಆಪ್ತರ ಜತೆ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಅಧಿಕೃತವಾಗಿ ತಮ್ಮ ಕಚೇರಿಯಿಂದ ರಾಜಭವನಕ್ಕೆ ಪತ್ರ ರವಾನಿಸಲು ನಿರ್ಧರಿಸಿದ್ದಾರೆ.

ಸಮಾಜ ಕಲ್ಯಾ ಖಾತೆ ಕೋರಿ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದರು. ಆದರೆ ಅದು ಸಿದ್ದರಾಮಯ್ಯ ಆಪ್ತರಾದ ಆಂಜನೇಯ ಅವರ ಬಳಿ ಇದೆ. ರಾಜೀನಾಮೆ ಪ್ರಹಸನ ಮುಕ್ತಾಯಗೊಳಿಸುವಾಗ ಅಧಿವೇಶನದ ಬಳಿಕ ಜಾರಕಿಹೊಳಿ ಅವರಿಗೆ ತಮ್ಮ ಬಳಿ ಇರುವ ಸಣ್ಣ ಕೈಗಾರಿಕೆ ಖಾತೆ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು.

ಆದರೆ ಅಧಿವೇಶನ ಮುಗಿದರೂ ಖಾತೆ ಬದಲಾವಣೆ ಮಾಡದ ಹಿನ್ನಲೆಯಲ್ಲಿ ಸ್ವತಃ ಸತೀಶ್ ಜಾರಕಿಹೊಳಿ ಬೆಳಿಗ್ಗೆ ಸಿಎಂ ಗೃಹ ಕಛೇರಿ ಕೃಷ್ಣಾಗೆ ಆಗಮಿಸಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿದ್ದರು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಜಾರಕಿಹೊಳಿ ಅವರ ಖಾತೆ ಬದಲಾವಣೆ ಮಾಡಲು ನಿರ್ಧರಿಸಿ, ಅವರ ಬಳಿಯಿದ್ದ ಅಬಕಾರಿ ಖಾತೆ ವಾಪಸ್ ಪಡೆದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited