ನವದೆಹಲಿ : ಕಾರ್ಪೋರೇಟ್ ಬೇಹುಗಾರಿಕೆ ಮತ್ತು ರಹಸ್ಯ ಸರ್ಕಾರಿ ದಾಖಲೆಗಳ ಮಾಹಿತಿ ಸೋರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಆಡಿಟ್ ವಿಭಾಗದ ನೌಕರನನ್ನು ಬಂಧಿಸಲಾಗಿದೆ.
ದೆಹಲಿ ಕ್ರೈಮ್ ಬ್ರ್ಯಾಂಚ್ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಆರೋಪಿ ವಿರೇಂದರ್ ಎಂದು ತಿಳಿದುಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಯಂ ಸಚಿವಾಲಯದ ಮತ್ತೋರ್ವ ನೌಕರ ಲೋಕೆಶ್ ಎಂಬಾತನನ್ನು ಫೆ.23ರಂದು ಬಂಧಿಸಲಾಗಿತ್ತು.
ಶಾಸ್ತ್ರಿ ಭವನದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್, ಮೇಲೆ ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಲೋಕೇಶ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು.
ಆರೋಪಿ ಲೋಕೇಶ್ ಗೆ ವಿರೇಂದರ್ ನಕಲಿ ಐಡಿ ಚೀಟಿ ನೀಡಿದ್ದ. ಈ ಹಿನ್ನಲೆಯಲ್ಲಿ ವಿರೇಂದರ್ ನನ್ನು ಸೆರೆಹಿಡಿಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 14 ರೋಪಿಗಳನ್ನು ಬಂಧಿಸಲಾಗಿದೆ.