Untitled Document
Sign Up | Login    
Dynamic website and Portals
  
February 16, 2015

ಕಪ್ಪು ಹಣ: ಮಾಹಿತಿದಾರನಿಗೆ ಕಮಿಷನ್‌ ನೀಡಲು ಕೇಂದ್ರದ ನಿರ್ಧಾರ

ಪ್ಯಾರಿಸ್‌ : ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಕುರಿತು ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಗೆ, ಆತ ನೀಡುವ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾಗುವ ಕಪ್ಪು ಹಣದಲ್ಲಿ ಶೇ.5ರಷ್ಟು ಕಮೀಷನ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಪ್ಪು ಕುಳಗಳ ಪಟ್ಟಿಯನ್ನು ಕದ್ದು ಬಿಡುಗಡೆ ಮಾಡಿದ ಸ್ವಿಜರ್ಲೆಂಡ್‌ನ‌ ಎಚ್‌ಎಸ್‌ಬಿಸಿ ಬ್ಯಾಂಕಿನ ಮಾಜಿ ಉದ್ಯೋಗಿ ಹರ್ವ್‌ ಫಾಲ್ಸಿಯಾನಿಗೆ ಕೇಂದ್ರ ಸರ್ಕಾರ ಈ ಆಶ್ವಾಸನೆ ನೀಡಿದೆ. ಈ ಕುರಿತು ಖುದ್ದು ಫಾಲ್ಸಿಯಾನಿಯೇ ಈ ವಿಷಯವನ್ನು ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾನೆ. "ಭಾರತದಿಂದ ಬಂದ ಪ್ರಸ್ತಾವಕ್ಕೆ ಸಹಿ ಹಾಕಿ, ವಾಪಸ್‌ ಕಳಿಸಿದ್ದೇನೆ' ಎಂದು ಆತ ಹೇಳಿದ್ದಾನೆ.

ಕಪ್ಪು ಹಣ ಕುರಿತು ನನ್ನ ಬಳಿ ಇರುವ ಎಲ್ಲ ಮಾಹಿತಿಯನ್ನೂ ಭಾರತೀಯ ತನಿಖಾಧಿಕಾರಿಗಳಿಗೆ ನೀಡುತ್ತೇನೆ. ಅವರಿಗೆ ಯಾವುದು ಅವಶ್ಯವೋ ಅದನ್ನು ಬಳಸಿಕೊಳ್ಳಬಹುದು. ನನ್ನ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾದ ಕಪ್ಪು ಹಣದ ಪೈಕಿ ಶೇ.5ರಷ್ಟನ್ನು ಬಹುಮಾನದ ರೂಪದಲ್ಲಿ ನೀಡುವುದಾಗಿ ಭಾರತ ಸರ್ಕಾರ ತಿಳಿಸಿದೆ. ಆದರೆ ನನಗೆ ಹಣಕ್ಕಿಂತ ಕಪ್ಪು ಹಣ ವಿಚಾರದಲ್ಲಿ ಜನಜಾಗೃತಿ ಮುಖ್ಯ ಎಂದು ತಿಳಿಸಿದ್ದಾನೆ.

ವಿದೇಶಿ ತೆರಿಗೆ ಸ್ವರ್ಗ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರು ಆ ಖಾತೆ ತಮ್ಮದಲ್ಲ ಎಂದು ನಟಿಸುತ್ತಿದ್ದಾರೆ. ವಿವಿಧ ದೇಶಗಳ ತನಿಖಾಧಿಕಾರಿಗಳಿಗೂ ಇದೇ ತೆರನಾದ ಸಮಸ್ಯೆ ಎದುರಾಗಿತ್ತು. ಬಳಿಕ ಖಾತೆ ಅವರದ್ದೇ ಎಂಬುದನ್ನು ಸಾಬೀತುಪಡಿಸಲಾಯಿತು. ಸಾಮಾನ್ಯವಾಗಿ ಶ್ರೀಮಂತ ಗ್ರಾಹಕರು ತಮ್ಮ ಸಂಪತ್ತನ್ನು ವಿವಿಧ ದೇಶಗಳಲ್ಲಿ ಇಡುತ್ತಾರೆ. ಭಾರತದಲ್ಲಿ ಬಹಿರಂಗಗೊಂಡಿರುವ ಪಟ್ಟಿಯಲ್ಲಿ ಉಲ್ಲೇಖಗೊಂಡಿರುವ ಕಪ್ಪು ಹಣದ ಮೊತ್ತಕ್ಕಿಂತ ಮೂರು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಖಾತೆದಾರರು ಹೊಂದಿರುತ್ತಾರೆ ಎಂದು ಹೇಳಿದ್ದಾನೆ.

ಕಪ್ಪು ಹಣ ಇಟ್ಟಿರುವ ವ್ಯಕ್ತಿಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಫಾಲ್ಸಿಯಾನಿಗೆ ಕೋರಿಕೆ ಸಲ್ಲಿಸಲಾಗಿದೆ. ಅವರಿಂದ ಉತ್ತರ ನಿರೀಕ್ಷಿಸಲಾಗುತ್ತಿದೆ ಎಂದು ಕೆಲ ದಿನಗಳ ಹಿಂದಷ್ಟೇ ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited