ಕೋಲ್ಕತ್ತಾ : 290 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ.
ನೌಕಾಪಡೆಗೆ ಹೊಸದಾಗಿ ಸೇರ್ಪಡೆಗೊಂಡ ಐಎನ್ಎಸ್ ಕೋಲ್ಕತಾ ಸಮರ ನೌಕೆಯಿಂದ ಬ್ರಹ್ಮೋಸ್ ಅನ್ನು ಉಡಾವಣೆ ಮಾಡಲಾಯಿತು.
2014ರ ಆ.16ರಂದು ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಕೋಲ್ಕತಾವು ಅತ್ಯಧಿಕ ಸಂಖ್ಯೆಯ ಅಂದರೆ 16 ಬ್ರಹ್ಮೋಸ್ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ನೌಕೆಗಳು 8 ಕ್ಷಿಪಣಿಗಳನ್ನಷ್ಟೇ ಉಡಾಯಿಸಬಲ್ಲವು.