Untitled Document
Sign Up | Login    
Dynamic website and Portals
  
February 11, 2015

ಪ್ರೇಮಿಗಳ ದಿನಾಚರಣೆ ಬದಲು ಮಾತಾ ಪಿತ ಪೂಜನೀಯ ದಿನಾಚರಣೆಗೆ ಶ್ರೀರಾಮ ಸೇನೆ ಕರೆ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : ಫೆ.14ರಂದು ನಡೆಯುವ ವ್ಯಾಲೆಂಟೈನ್ಸ್ ಡೇಗೆ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿದೆ. ಪ್ರೇಮಿಗಳ ದಿನಾಚರಣೆಯಂದು 'ಮಾತಾ ಪಿತ ಪೂಜನೀಯ ದಿನ'ವನ್ನು ಆಚರಿಸಬೇಕೆಂದು ಶ್ರೀರಾಮ ಸೇನೆ ಕರೆ ನೀಡಿದೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಫೆಬ್ರವರಿ 14 ರಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕ ವಾಗಿ ಆಚರಿಸಲಾಗುವ 'ವ್ಯಾಲಂಟೈನ್ಸ್‌ ಡೇ'ಯನ್ನು ಶ್ರೀರಾಮ ಸೇನೆ ಸಂಪೂರ್ಣವಾಗಿ ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೇಮಿಗಳ ದಿನ ದಂದು ಸ್ವೇಚ್ಛಾಚಾರದಲ್ಲಿ ತೊಡಗಿರುವವರು ಕಂಡು ಬಂದರೆ ಶ್ರೀರಾಮ ಸೇನೆ ಅಂತಹವರಿಗೆ ಮದುವೆ ಮಾಡಿಸುತ್ತದೆ' ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಪ್ರೇಮಿಗಳ ದಿನಾಚರಣೆಯ ಬದಲಾಗಿ ಯುವ ಬ್ರಿಗೇಡ್ ಸಂಘಟನೆ ಸಹ ಪರ್ಯಾಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೈ ನೇಷನ್ ಮೈ ಲವ್ ಎಂಬ ರಾಷ್ಟ್ರಪ್ರೇಮವನ್ನು ಯುವಕರಲ್ಲಿ ಜಾಗೃತಗೊಳಿಸುವ ಕಾರ್ಯಕ್ರಮ ನಡೆಸುತ್ತಿದೆ.

ರಾಜ್ಯದಲ್ಲಿ ವಿವಿಧ ಸಂಘಟನೆಗಳು ವ್ಯಾಲೆಂಟೈನ್ಸ್ ಡೇಗೆ ಮರುನಾಮಕರಣ ಮಾಡುತ್ತಿದ್ದರೆ, ಚತ್ತೀಸ್ ಘಡದಲ್ಲಿ ರಮಣ್ ಸಿಂಗ್ ನೇತೃತ್ವದ ಸರ್ಕಾರವೇ ಪ್ರೇಮಿಗಳ ದಿನಾಚರಣೆ ಬದಲು ಪರ್ಯಾಯವಾದ ಕಾರ್ಯಕ್ರಮ ಘೋಷಿಸಿದೆ. ಫೆ.14ರಂದು ಪ್ರೇಮಿಗಳ ದಿನಾಚರಣೆ ಆಚರಿಸುವ ಬದಲು ಮಾತಾ-ಪಿತೃಗಳ ದಿನಾಚರಣೆಯನ್ನಾಗಿ ಆಚರಿಸಲು ಆದೇಶಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ
  • ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ
  • 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited