Untitled Document
Sign Up | Login    
Dynamic website and Portals
  
February 10, 2015

ದೆಹಲಿ ವಿಧಾನಸಭಾ ಚುನಾವಣೆ: ಆಮ್ ಆದ್ಮಿಗೆ ಐತಿಹಾಸಿಕ ಗೆಲುವು

ದೆಹಲಿ ವಿಧಾನಸಭಾ ಚುನಾವಣೆ; ಆಪ್ ಗೆ ಐತಿಹಾಸಿಕ ಗೆಲುವು ದೆಹಲಿ ವಿಧಾನಸಭಾ ಚುನಾವಣೆ; ಆಪ್ ಗೆ ಐತಿಹಾಸಿಕ ಗೆಲುವು

ನವದೆಹಲಿ : ತೀವ್ರ ಕುತೂಹ ಮತ್ತು ಜಿದ್ದಾಜಿದ್ದಿನ ಕಣವಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಅಭೂತಪೂರ್ವ ಗೆಲುವು ಸಾಧಿಸಿದೆ.

7೦ ವಿಧಾನಸಭಾ ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಆಪ್ ಪಕ್ಷ ಜಯಭೇರಿ ಭಾರಿಸಿ ದೆಹಲಿ ಚುನಾವಣಾ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದೆ. ಈ ಮೂಲಕ ಸಂಪೂರ್ಣ ಬಹುಮತದ ಮೂಲಕ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ 2ನೇ ಬಾರಿ ದೆಹಲಿಯಲ್ಲಿ ಅಧಿಕಾರಕ್ಕೆರ್ ಬರಲಿದೆ.

ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದಕೊಳ್ಳಬೇಕಾದ ಸ್ಥಿತಿಯಲ್ಲಿದೆ. ವಿಪಕ್ಷ ಸ್ಥಾನಕ್ಕೆ ಕನಿಷ್ಟ 7 ಸ್ಥಾನಗಳನ್ನು ಗೆಲ್ಲಬೇಕು.

ಇನ್ನು ಐತಿಹಾಸಿಕ ಪಕ್ಷ ಕಾಂಗ್ರೆಸ್ ಆಮ್ ಆದ್ಮಿ ಎದುರು ಧೂಳಿಪಟವಾಗಿದ್ದು, ಶೂನ್ಯ ಸಾಧನೆಮಾಡುವ ಮೂಲ ತೀವ್ರ ಮುಖಭಂಗ ಅನುಭವಿಸಿದೆ.

 

70 ವಿಧಾನಸಭಾ ಕ್ಷೇತ್ರಗಳು-
ಆಮ್ ಆದ್ಮಿ ಪಕ್ಷ - 67
ಬಿಜೆಪಿ - 3
ಕಾಂಗ್ರೆಸ್ - ೦
ಇತರೆ - ೦
ನಿರೀಕ್ಷೆಗೂ ಮೀರಿ ಜಯಭೇರಿ ಭಾರಿಸಿರುವ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಫೆ.14ರಂದು ಪದಗ್ರಹಣ ಮಾಡಲಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನ ಗಳಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿತ್ತು. 2015ರ ಚುನಾವಣೆಯಲ್ಲೂ ದೆಹಲಿಯ ಮತದಾರ ಅರವಿಂದ್ ಕೇಜ್ರಿವಾಲ್ ಗೆ ಫುಲ್ ಮಾರ್ಕ್ಸ್ ನೀಡುವ ಮೂಲಕ ಮತ್ತೆ ಗದ್ದುಗೆ ಏರಲು ಅವಕಾಶ ಮಾಡಿಕೊಟ್ಟಿದ್ದಾರೆ.

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited