Untitled Document
Sign Up | Login    
Dynamic website and Portals
  
February 6, 2015

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

ನವದೆಹಲಿ : 'ಸಾಮಾಜಿಕ ಜಾಲತಾಣ' ಆರ್ಕುಟ್ ನ್ನು ಮುಚ್ಚಿದ ನಂತರ ಪ್ರಸಿದ್ಧ ಅಂತರ್ಜಾಲ ಸಂಸ್ಥೆ ಗೂಗಲ್ ಈಗ ತನ್ನದೇ ಆದ ಮತ್ತೊಂದು ಸಾಮಾಜಿಕ ಜಾಲತಾಣ ಗೂಗಲ್ ಟಾಕ್(ಜಿಟಾಕ್) ನ್ನು ಮುಚ್ಚಲು ತೀರ್ಮಾನಿಸಿದೆ.

ಗೂಗಲ್ ಟಾಕ್ ಮೆಸೆಂಜರ್ ಸೇವೆ ಫೆ.16ರಿಂದ ಶಾಶ್ವತವಾಗಿ ಸ್ಥಗಿತಗೊಳ್ಳಲಿದೆ ಎಂದು ಗೂಗಲ್ ಹೇಳಿದೆ. ಗೂಗಲ್ ಟಾಕ್ ನ ಲಕ್ಷಾಂತರ ಬಳಕೆದಾರರು ಇನ್ನು ಮುಂದೆ ಗೂಗಲ್ ಹ್ಯಾಂಗೌಟ್ ಸೇವೆಯನ್ನು ಬಳಸಬೇಕಾಗುವುದು ಅನಿವಾರ್ಯವಾಗಲಿದೆ.

ಗೂಗಲ್ ಹ್ಯಾಂಗೌಟ್ ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಇನ್ಸ್ಟೆಂಟ್ ಮೆಸೇಜಿಂಗ್ ಮತ್ತು ವೀಡಿಯೊ ಚಾಟ್ ಮಾಡುವುದಕ್ಕಾಗಿ ಗೂಗಲ್ ರೂಪಿಸಿರುವ ಮತ್ತೊಂದು ವಿಭಾಗವಾಗಿದೆ. ಜಿಟಾಕ್ ನ ಜನಪ್ರಿಯತೆ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗೂಗಲ್ ಹ್ಯಾಂಗೌಟ್ ಸೇವೆ ಜಿಟಾಕ್ ಸೇವೆಯ ಬದಲು ಜಾರಿಗೆ ಬರಲಿದೆ.

ಡೆಸ್ಕ್ ಟಾಪ್ ಗಳಿಗೆ ಸೆಕ್ಯುರಿಟಿ ಹಾಗೂ ಆವೃತ್ತಿಯನ್ನು ಅಪ್ ಡೇಟ್ ಮಾಡುವ ಅವಕಾಶವನ್ನು ಹಿಂಪಡೆದಿದ್ದರಿಂದ ಗೂಗಲ್ ಟಾಕ್(ಜಿಟಾಕ್) ನ ಜನಪ್ರಿಯತೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಜಿಟಾಕ್ ನ ಬಳಕೆದಾರರು ಫೆ.16ರಂದು ತಮ್ಮ ಕೊನೆಯ ಸಂದೇಶವನ್ನು ಕಳಿಸಬಹುದಾಗಿದೆ. ಆ ನಂತರ ಆರ್ಕುಟ್ ನಂತೆಯೇ ಜಿಟಾಕ್ ಸಹ ಇತಿಹಾಸದ ಪುಟ ಸೇರಲಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಕಂಪ್ಯೂಟರ್ ಗಳಿಗೂ ಲಗ್ಗೆ ಇಟ್ಟಿದ್ದೂ ಸಹ ಜಿಟಾಕ್ ಜನಪ್ರಿಯತೆಗೆ ಹೊಡೆತ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited