Untitled Document
Sign Up | Login    
Dynamic website and Portals
  
February 4, 2015

ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಅಟ್ಟಹಾಸಕ್ಕೆ ಪ್ರತೀಕಾರ ತೀರಿಸಿಕೊಂಡ ಜೋರ್ಡಾನ್

ಜೋರ್ಡಾನ್ ಪೈಲೆಟ್ ಸಜೀವ ದಹನ ಜೋರ್ಡಾನ್ ಪೈಲೆಟ್ ಸಜೀವ ದಹನ

ಬೈರೂತ್‌ : 'ಜೋರ್ಡಾನ್‌' ಪೈಲೆಟ್ ನ ಜೀವಂತವಾಗಿ ದಹಿಸಿದ ಘಟನೆ ನಡೆದ 24 ಗಂಟೆಗಳಲ್ಲಿ ಜೋರ್ಡಾನ್ ಆಡಳಿತ ಇಸ್ಲಾಮಿಕ್ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡಿದೆ.

ಇಬ್ಬರು ಉಗ್ರರಿಗೆ ಮರಣ ದಂಡನೆ ವಿಧಿಸುವ ಮೂಲಕ ಜೋರ್ಡಾನ್ ತನ್ನ ಪೈಲೆಟ್ ನ ಸಾವಿಗೆ ಪ್ರತೀಕಾರ ತೀರಿಸಿಕೊಂಡಿದೆ. ಈ ಪೈಕಿ ಓರ್ವ ಮಹಿಳಾ ಉಗ್ರಳೂ ಸೇರಿದ್ದು ಆಕೆ ಆತ್ಮಾಹುತಿ ಬಾಂಬರ್ ಆಗಿದ್ದಳು ಎಂದು ತಿಳಿದುಬಂದಿದೆ.

ನೇಣಿಗೇರಿದ ಮಹಿಳೆ 2005 ರಲ್ಲಿ ಅಮ್ಮಾನ್‌ ಹೊಟೇಲ್‌ನಲ್ಲಿ ನಡೆದ ತ್ರಿವಳಿ ಬಾಂಬ್‌ ದಾಳಿ ಕೃತ್ಯದಲ್ಲಿ ಭಾಗಿಯಾದ ಸಾಜಿದಾ ಅಲ್‌ ರಿಶ್‌ ವಿ ಎಂಬ ಬಾಂಬರ್‌ ಆಗಿದ್ದು, ಆಕೆಯನ್ನು ಜೋರ್ಡಾನ್‌ ಸರ್ಕಾರ ಬಂಧಿಸಿ ಜೈಲಿನಲ್ಲಿರಿಸಿತ್ತು.

ಇಸ್ಲಾಮಿಕ್ ಉಗ್ರರ ಅಟ್ಟಹಾಸಕ್ಕೆ ಪ್ರತಿಕ್ರಿಯಿಸಿದ್ದ ಜೋರ್ಡಾನ್, ಭಯೋತ್ಪಾದಕರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ನೆ ಮಾಡಿತ್ತು. ಅದರಂತೆಯೇ ಈಗ ಇಬ್ಬರು ಉಗ್ರರನ್ನು ಗಲ್ಲಿಗೇರಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

ಉಗ್ರರ ಮರಣದಂಡನೆಗೆ ಪ್ರತಿಕ್ರಿಯೆ ನೀಡಿರುವ ಇಸ್ಲಾಮಿಕ್ ಸ್ಟೇಟ್, ಜೋರ್ಡಾನ್ ಮೇಲೆ ಆಕ್ರಮಣ ನಡೆಸುವುದಾಗಿ ಎಚ್ಚರಿಸಿದೆ. ಇಬ್ಬರು ಉಗ್ರರನ್ನು ನೇಣುಹಾಕಿದ ಮಾತ್ರಕ್ಕೆ ಅದನ್ನು ಜೋರ್ಡಾನ್ ನ ಗೆಲುವು ಎಂದು ಹೇಳಲು ಸಾಧ್ಯವಿಲ್ಲ ಎಂದು ಇಸ್ಲಾಮಿಕ್ ಸ್ಟೇಟ್ ಎಚ್ಚರಿಸಿದೆ.

ಕಳೆದ ಡಿಸೆಂಬರ್‌ ನಲ್ಲಿ ತಾನು ಬಂಧಿಸಿ ಇಟ್ಟು ಕೊಂಡಿದ್ದ ಜೋರ್ಡಾನ್‌ ಮೂಲದ ಪೈಲಟ್‌ ಮಾಜ್‌ ಅಲ್‌ ಕಸಾಬೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಪಂಜರವೊಂದರಲ್ಲಿ ಇಟ್ಟು ಸಜೀವ ದಹನ ಮಾಡಿ ಅದರ ವಿಡಿಯೋ ಬಿಡುಗಡೆ ಮಾಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited