Untitled Document
Sign Up | Login    
Dynamic website and Portals
  
February 3, 2015

ಪ್ರಧಾನಿ ಮೋದಿ ಗುರಿಯಾಗಿಸಿ ಐಸಿಸ್ ಹೊಸ ಟ್ವಿಟರ್ ಖಾತೆ

ನವದೆಹಲಿ : ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿಯ ವೇಳೆ ಕಾರ್ ಬಾಂಬ್‌ ದಾಳಿ ನಡೆಸಲಾಗುವುದೆಂಬ ಎಚ್ಚರಿಕೆಯನ್ನು ನೀಡಿದ್ದ ಐಸಿಸ್‌ ಪರ ಟ್ವಿಟರ್ ಖಾತೆ ಈಗ ಹೊಸ ರೀತಿಯಲ್ಲಿ ಪ್ರತ್ಯಕ್ಷಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಖಾತೆಯು ಗುರಿಯಾಗಿರಿಸಿಕೊಂಡಿದ್ದು ಗುಪ್ತಚರ ಇಲಾಖೆಯ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಐಸಿಸ್‌ ಪರವಾಗಿರುವ ಈ ಹೊಸ ಟ್ವಿಟರ್ ಖಾತೆಯನ್ನು ಐಸಿಸ್‌ಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿರುವ ಮುಂಬೈನ ನಾಲ್ವರು ಶಂಕಿತರ ಪೈಕಿ ಒಬ್ಬನು ನಿರ್ವಹಿಸುತ್ತಿರುವುದಾಗಿ ಶಂಕಿಸಲಾಗಿದೆ. ಆದರೆ ಈ ಟ್ವಿಟರ್ ಖಾತೆಯನ್ನು ತೆರೆದಿರುವಾತ ಟರ್ಕಿಯಲ್ಲಿ ವಾಸವಾಗಿರುವುದನ್ನು ಖಾತೆಯು ತೋರಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿರಿಸಿಕೊಂಡು ಪ್ರತ್ಯಕ್ಷವಾಗಿರುವ ಈ ಹೊಸ ಟ್ವಿಟರ್ ಖಾತೆ ಅಂತರ್ಜಾಲದಲ್ಲಿ ಕಾಣಿಸಿಕೊಂಡ ಮೊದಲ ದಿನವೇ 500 ಹಿಂಬಾಲಕರನ್ನು ಬಾಚಿಕೊಂಡಿದೆ, ಮಾತ್ರವಲ್ಲದೆ 220 ಐಸಿಸ್‌ ಪರ ಸಂದೇಶಗಳನ್ನು ಪಡೆದುಕೊಂಡಿದೆ.

ಇಷ್ಟೊಂದು ತ್ವರಿತಗತಿಯಲ್ಲಿ ಮತ್ತು ಗಮನಾರ್ಹ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹಾಗೂ ಸಂದೇಶ ಪ್ರಕಟನಕಾರರನ್ನು ಹೊಂದಿರುವ ಈ ಖಾತೆಯ ಬಗ್ಗೆ ಗುಪ್ತಚರ ದಳಕ್ಕೆ ಆತಂಕ ಹಾಗೂ ತಲೆನೋವು ಶುರುವಾಗಿದೆ.

ಅಲ್ಲದೇ ಸಿರಿಯಾ ಪ್ರದೇಶಗಳನ್ನು ಪ್ರವೇಶಿಸುವ ಹವಣಿಕೆಯಲ್ಲಿರುವ ಭಾರತೀಯ ಪ್ರಜೆಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಈ ಕಳವಳಕ್ಕೆ ಕಾರಣವಾಗಿದೆ. ಅಂತೆಯೇ ಟ್ವಿಟರ್ ನಲ್ಲಿ ಐಸಿಸ್‌ ಪರವಾಗಿ ಕಾಣಿಸಿಕೊಳ್ಳುತ್ತಿರುವ ಪ್ರಚಾರ ಸಾಮಗ್ರಿಗಳು, ಪ್ರಚೋದಕ ಬರಹಗಳು ಹಾಗೂ ಅವುಗಳ ಹಿಂದಿರುವ ವ್ಯಕ್ತಿಗಳನ್ನು ಕಂಡು ಹಿಡಿಯಲು ಗುಪ್ತಚರ ದಳ ಪ್ರಯತ್ನ ನಿರತವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited