Untitled Document
Sign Up | Login    
Dynamic website and Portals
  
January 31, 2015

ದೆಹಲಿ ಚುನಾವಣೆ: ಆಪ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಅರವಿಂದ್ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್

ನವದೆಹಲಿ : ಫೆ.7ರಂದು ನಡೆಯಲಿರುವ ದೆಹಲಿ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್, ಆಶಿಷ್ ಕೇತನ್ ನೇತೃತ್ವದಲ್ಲಿ ಸಿದ್ಧಗೊಂಡ 70 ಅಂಶಗಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಎಎಪಿ ಈ ಬಾರಿ ಮೊಹಲ್ಲಾ ಸಭಾ ರಚನೆಯನ್ನು ಕೈಬಿಟ್ಟು ದಿಲ್ಲಿ ಸಂವಾದ ಪರಿಕಲ್ಪನೆಯನ್ನು ಮುಂದಿಟ್ಟಿದೆ. ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರ ಮನವೊಲಿಕೆಗೆ ಆಪ್ ಯತ್ನ ನಡೆಸಿದೆ.

ನಮ್ಮ ಪ್ರಣಾಳಿಕೆಯನ್ನು 4 ತಿಂಗಳಲ್ಲಿ ಸಿದ್ಧಳಿಸಿದ್ದೇವೆ. ಭ್ರಷ್ಟಾಚಾರ ಸಂಪ್ರದಾಯವನ್ನು ಕೊನೆಗೊಳಿಸಿ, ದೆಹಲಿಯನ್ನು ಜಾಗತಿಕ ನಗರವನ್ನಾಗಿ ಪರಿವರ್ತಿಸುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಎಎಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು:
* ಶಿಕ್ಷಣ ಕ್ಷೇತ್ರ, ಮಹಿಳೆಯರ ಸುರಕ್ಷಿತತೆಗೆ ಹೆಚ್ಚಿನ ಒತ್ತು.
* 8 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ
* 30,000 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಗಳ ನಿರ್ಮಾಣ
* 20 ಹೊಸ ಕಾಲೇಜುಗಳ ಸ್ಥಾಪನೆ
* ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ
* ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಮತ್ತು ವೈಫೈ ಸೌಕರ್ಯ
* ಶೇ.50ರಷ್ಟು ರಿಯಾಯಿತಿಯಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ
* ಉಚಿತ ಜೀವನಾಧಾರ ನೀರು ಪೂರೈಕೆ
* ಅನಧಿಕೃತ ಕಾಲೋನಿ ಅಧಿಕೃತವಾಗಿಸಲು ಕ್ರಮ
* ದೆಹಲಿಯಲ್ಲಿ ಜನಲೋಕಪಾಲ್ ಜಾರಿ ಭರವಸೆ
* ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕಾಗಿ ಅಗತ್ಯ ಕ್ರಮ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited