BW News Bureau : ಬೆಂಗಳೂರಿನಲ್ಲಿ ಬೋಡೋ ಉಗ್ರರನ ಬಂಧನ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಬಂಧಿತ ಉಗ್ರ ಅಸ್ಸಾಂನಲ್ಲಿ ಬೋಡೋ ಉಗ್ರ ಸಂಘಟನೆ ಕಮಾಂಡರ್ ಆಗಿದ್ದಾನೆ ಎಂದು ತಿಳಿಸಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ಮತ್ತು ಅಸ್ಸಾಂ ಪೊಲೀಸರು ನೀಡಿದ ಮಾಹಿತಿಯ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಕಾಟನ್ಪೇಟೆಯಲ್ಲಿ ಅಡಗಿದ್ದ ಶಂಕಿತ ಬೋಡೋ ಉಗ್ರನನ್ನು ಬೆಳಿಗ್ಗೆ ಬಂಧಿಸಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎನ್.ರೆಡ್ಡಿ, ಬಂಧಿತ ಉಗ್ರ 24 ವರ್ಷದಶ್ ಅಸ್ಸಾಂ ಮೂಲದ ಬೀರ್ ಖಾನ್ ನರ್ಜರಿ ಎಂದು ಹೇಳಿದರು.
ಈತ ಅಸ್ಸಾಂನ ಕೋಕ್ರಝಾರ್ ಜಿಲ್ಲೆಯಲ್ಲಿ ನಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಅಲ್ಲಿ ಬೋಡೋ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ. ಡಿಸಿಪಿ ಲಾಬೂರಾಮ್ ನೇತೃತ್ವದಲ್ಲಿ ನರ್ಜರಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.