ನವದೆಹಲಿ : 'ಲೋಕಸಭಾ ಚುನಾವಣೆ'ಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲುವು ಭಾರತೀಯತೆಯ ಗೆಲವು ಎಂದಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಜನಾರ್ದನ್ ದ್ವಿವೇದಿ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರವಾಗಿ ಆಕ್ರೋಶಗೊಂಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಮುಖಂಡ ಅಜಯ್ ಮಕೇನ್, ದ್ವಿವೇದಿ ಅವರ ಹೇಳಿಕೆಯನ್ನು ಖಂಡಿಸಲು ಪದಗಳು ಸಾಲುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಗೆಲುವು ಭಾರತೀಯತೆಯ ಗೆಲವು ಎಂದು ಹೇಳಲು 'ಮೋದಿ ಭಾರತೀಯತೆಯ ಸಂಕೇತವೇ ಅಲ್ಲ' ಎಂದು ಅಜಯ್ ಮಕೇನ್ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ಅವರನ್ನು ಹೊಗಳಿರುವುದಕ್ಕಾಗಿ ಜನಾರ್ದನ್ ದ್ವಿವೇದಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಬಗ್ಗೆ ಕಾಂಗ್ರೆಸ್ ನ ಹಿರಿಯ ಮುಖಂಡರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅಜಯ್ ಮಕೇನ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರ ಗೆಲುವಿನ ಬಗ್ಗೆ ಮಾತನಾಡಿದ್ದ ಜನಾರ್ದನ್ ದ್ವಿವೇದಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲುವು ಭಾರತೀಯತೆಯ ಗೆಲವು ಎಂದು ಬಣ್ಣಿಸಿದ್ದರು.