ಹೈದರಾಬಾದ್ : 'ಆಂಧ್ರಪ್ರದೇಶ' ಹೆಚ್ಚು ಯುವಕರನ್ನು ಹೊಂದಲು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, , ಜಪಾನ್ ದೇಶದಲ್ಲಿ ಯುವಕರಿಗಿಂತ ಮುದುಕರ ಪ್ರಮಾಣವೇ ಹೆಚ್ಚಾಗುತ್ತಿರುವಂತೆಯೇ ಆಂಧ್ರಪ್ರದೇಶದಲ್ಲೂ ಯುವಕರಿಗಿಂತ ವೃದ್ಧರೇ ಹೆಚ್ಚಿದ್ದಾರೆ. ರಾಜ್ಯದಲ್ಲಿ ಯುವಕರನ್ನು ಹೆಚ್ಚಿಸಲು ದಂಪತಿಗಳು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು. ಪರಿಣಾಮ ಭವಿಷ್ಯದಲ್ಲಿ ಆಂಧ್ರಪ್ರದೇಶದಲ್ಲಿ ಯುವಕರು ಹೆಚ್ಚಲಿದ್ದಾರೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಯುವಕರು ಬೇಗ ಮದುವೆಯಾಗುತ್ತಿಲ್ಲ. ಅವರು ಬೇಗ ಜವಾಬ್ದಾರಿಗಳನ್ನು ಹೊರಲು ತಯಾರಿಲ್ಲ ಹೀಗಾಗಿ ಇತರ ರಾಜ್ಯಗಳಿಗಿಂತಲೂ ತಮ್ಮ ರಾಜ್ಯದಲ್ಲಿ ಯುವಜನತೆಯ ಅನುಪಾತ ಕಡಿಮೆ ಇದ್ದು ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.
ಈ ಹಿಂದೆ ಚಂದ್ರಬಾಬು ನಾಯ್ಡು ಅವರು ಪ್ರಥಮ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಕುಟುಂಬ ನಿಯಂತ್ರಣ ಯೋಜನೆಗೆ ರಾಜ್ಯದಲ್ಲಿ ಸಾಕಷ್ಟು ಒತ್ತು ನೀಡಿದ್ದರು. ಇದೀಗ ಇದೇ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಯುವ ಜನಾಂಗದ ಪ್ರಮಾಣ ಹೆಚ್ಚಾಗಲೆಂದು ಹೆಚ್ಚೆಚ್ಚು ಮಕ್ಕಳನ್ನು ಹೆರುವಂತೆ ಹೇಳಿದ್ದಾರೆ.