Untitled Document
Sign Up | Login    
Dynamic website and Portals
  
January 13, 2015

ಜನಾರ್ಧನ ರೆಡ್ಡಿಗೆ ಸಿಗಲಿದೆಯೇ ಬಿಡುಗಡೆ ಭಾಗ್ಯ?

ಜನಾರ್ಧನ ರೆಡ್ಡಿ ಜನಾರ್ಧನ ರೆಡ್ಡಿ

ನವದೆಹಲಿ : ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಇಂದು ಜನಾರ್ಧನ ರೆಡ್ಡಿ ಸಲ್ಲಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಒಂದು ವೇಳೆ ಜಾಮೀನು ಮಂಜೂರಾದರೆ ಮಾಜಿ ಸಚಿವ ಜನಾರ್ಧನ ರೆಡ್ಡಿಯವರಿಗೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಸಿಗಲಿದೆ.

ಜನಾರ್ಧನ ರೆಡ್ಡಿ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಗಿದ್ದವು. ಅವುಗಳಲ್ಲಿ ಈಗಾಗಲೇ 7 ಕೇಸ್ ಗಳಲ್ಲಿ ಜಾಮೀನು ದೊರೆತಿದ್ದು, ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಗಬೇಕಿದೆ. ಕರ್ನಾಟಕದ 5 ಹಾಗೂ ಆಂಧ್ರಪ್ರದೇಶದ 1 ಕೇಸ್ ನಲ್ಲಿ ಈಗಾಗಲೇ ಜಾಮೀನು ಸಿಕ್ಕಿದೆ.

ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಜಾಮೀನು ಸಿಕ್ಕರೆ 3 ವರ್ಷ, 3 ತಿಂಗಳ ಬಳಿಕ ಜನಾರ್ಧನ ರೆಡ್ಡಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. 2011, ಸೆ.5ರಂದು ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಕಾರಿಕೆ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿಯವರನ್ನು ಬಂಧಿಸಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited