Untitled Document
Sign Up | Login    
Dynamic website and Portals
  
January 10, 2015

ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ಅಧ್ಯಕ್ಷ ಗಾದಿ ಸಾಧ್ಯತೆ

ರಾಹುಲ್ ಗಾಂಧಿ ರಾಹುಲ್ ಗಾಂಧಿ

ನವದೆಹಲಿ : ಜ.16ರಂದು ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಹಾಲಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪಕ್ಷದ ಮುಂದಿನ ಅಧ್ಯಕ್ಷರನ್ನಾಗಿ ಮಾಡುವ ಸಂಭಾವ್ಯತೆಯು ಚರ್ಚೆಗೆ ಬರಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಗಾಂಧಿ ಕುಟುಂಬದ ಯುವ ತಾರೆಯಾಗಿರುವ ರಾಹುಲ್‌ ಗಾಂಧಿ ಅವರು ಪಕ್ಷದ ಮುಂದಿನ ಅಧ್ಯಕ್ಷರಾಗಬೇಕೆಂಬುದು ತನ್ನ ದೃಢ ಅಭಿಪ್ರಾಯವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಹೇಳಿರುವುದು ರಾಹುಲ್‌ ಅಧ್ಯಕ್ಷರಾಗುವ ಸಂಭಾವ್ಯತೆಗೆ ಪುಷ್ಟಿ ನೀಡಿದೆ.

ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕೆಂದು ನಾನು ಬಹಳ ಹಿಂದಿನಂದಲೂ ಹೇಳುತ್ತಲೇ ಬಂದಿದ್ದೇನೆ. ಜವಾಹರಲಾಲ್‌ ನೆಹರೂ ಅವರು 38ನೇ ವರ್ಷದಲ್ಲೇ ಎಐಸಿಸಿ ಮುಖ್ಯಸ್ಥರಾಗಿದ್ದರು. ಮೌಲಾನಾ ಆಝಾದ್‌ ಅವರು 35ರ ಹರೆಯದಲ್ಲೇ ಪಕ್ಷದ ಅಧ್ಯಕ್ಷರಾಗಿದ್ದರು. ರಾಹುಲ್‌ ಈಗಾಗಲೇ ಪಕ್ಷದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಾದರೂ ಅವರು ಪಕ್ಷದ ಅಧ್ಯಕ್ಷತೆ ವಹಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕು ಎಂದು ದಿಗ್ವಿಜಯ್‌ ಸಿಂಗ್‌ ಪುನರುಚ್ಚರಿಸಿದ್ದಾರೆ.

68ವರ್ಷದ ಸೋನಿಯಾ ಗಾಂಧಿ 1988ರ ಮಾರ್ಚ್‌ನಿಂದ ಪಕ್ಷಾಧ್ಯಕ್ಷೆಯಾಗಿದ್ದು ಅತ್ಯಂತ ದೀರ್ಘಾವಧಿಯಿಂದ ಈ ಹುದ್ದೆಯನ್ನು ನಿಭಾಯಿಸುತ್ತಿರುವ ಕಾಂಗ್ರೆಸ್‌ ನಾಯಕಿಯಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited