Untitled Document
Sign Up | Login    
Dynamic website and Portals
  
January 6, 2015

ಎಲ್‌ಇಡಿ ಬಲ್ಬ್ ವಿತರಣಾ ಕಾರ್ಯಕ್ರಮಕ್ಕೆ ಮೋದಿ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಾಮರ್ಥ್ಯ ವಿದ್ಯುದ್ದೀಕರಣ ಕಾರ್ಯಕ್ರಮದಡಿಯಲ್ಲಿ ಎಲ್‌ಇಡಿ ಬಲ್ಬ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್‌ಇಡಿಯನ್ನು ಪ್ರಕಾಶ ಪಥ -ಬೆಳಕಿನೆಡೆಗೆ ದಾರಿ ಎಂದು ಬಣ್ಣಿಸಿದರಲ್ಲದೆ ವಿದ್ಯುತ್ಛಕ್ತಿಯನ್ನು ಉತ್ಪಾದಿಸುವುದಕ್ಕಿಂತ ವಿದ್ಯುತ್ಛಕ್ತಿಯನ್ನು ಉಳಿಸುವುದು ಆರ್ಥಿಕ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದು ಅಭಿಪ್ರಾಯಪಟ್ಟರು.

ವಿದ್ಯುತ್‌ ದರಗಳನ್ನು ಕಡಿತಗೊಳಿಸಲು ಹಾಗೂ ಪರಿಸರವನ್ನು ಉಳಿಸಲು ಎಲ್‌ಇಡಿ ಬಲ್ಬ್ ಗಳ ಬಳಕೆ ಎಲ್ಲರಿಗೂ ಉಪಯುಕ್ತವಾಗಲಿದೆ ಎಂದು ಅವರು ನುಡಿದರು. ಈ ಬಲ್ಬ್ ಗಳು ಸಾಧಾರಣ ಬಲ್ಬ ಗಳಿಗಿಂತ 50 ಪಟ್ಟು ಹೆಚ್ಚಿನ ಬಾಳಿಕೆಯನ್ನು ಹೊಂದಿರುತ್ತವೆ ಹಾಗಾಗಿ ಮಧ್ಯಾವಧಿಯಲ್ಲಿ ಇವುಗಳು ಉತ್ತಮ ಶಕ್ತಿ ಸಂರಕ್ಷಕ ಹಾಗೂ ವೆಚ್ಚ ಸಂರಕ್ಷಕಗಳಾಗಿವೆ ಎಂದರು.

ಈ ಯೋಜನೆಯಡಿಯಲ್ಲಿ ದೆಹಲಿ ವಾಸಿಗಳು ಆನ್‌ಲೈನ್‌ ಮೂಲಕ ತಮ್ಮ ಆರ್ಡರ್‌ಗಳನ್ನು ನೀಡುವ ಉದ್ದೇಶದಿಂದ ವೆಬ್‌-ಆಧಾರಿತ ವ್ಯವಸ್ಥೆಗೂ ಸಹ ಪ್ರಧಾನಿಯವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಗೃಹ ಬಳಕೆಯಲ್ಲಿ ಮತ್ತು ದಾರಿದೀಪ ವ್ಯವಸ್ಥೆಯಲ್ಲಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವ ಈ ಮಹತ್ತರ ಯೋಜನೆಯು 2016ರ ಮಾರ್ಚ್‌ತಿಂಗಳಿನಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited