Untitled Document
Sign Up | Login    
Dynamic website and Portals
  
January 2, 2015

ಉತ್ತರ ಪ್ರದೇಶವಾಯ್ತು, ಬಿಹಾರದಲ್ಲೂ ಪಿಕೆಗೆ ತೆರಿಗೆ ವಿನಾಯಿತಿ ಘೋಷಣೆ

ಚಿತ್ರ ನೋಡದೇಇದ್ರೂ ನಿತೀಶ್ ಕುಮಾರ್ ಸಲಹೆ ಮೇರೆಗೆ ತೆರಿಗೆ ವಿನಾಯಿತಿ ಘೋಷಿಸಿದ ಬಿಹಾರ ಸಿ.ಎಂ ಮಾಂಝಿ

ಪಿಕೆ ಚಿತ್ರದ ಬಗ್ಗೆ ನಿತೀಶ್ ಕುಮಾರ್ ಮೆಚ್ಚುಗೆ ಪಿಕೆ ಚಿತ್ರದ ಬಗ್ಗೆ ನಿತೀಶ್ ಕುಮಾರ್ ಮೆಚ್ಚುಗೆ

ಪಾಟ್ನಾ : ದೇಶಾದ್ಯಂತ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪಿಕೆ ಚಿತ್ರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಹಾರದ ಮಾಜಿ ಸಿ.ಎಂ ನಿತೀಶ್ ಕುಮಾರ್ ಶ್ಲಾಘನೆ ವ್ಯಪಡಿಸಿದ್ದಾರೆ.

ಮಾಜಿ ಸಿ.ಎಂ ನಿತೀಶ್ ಕುಮಾರ್, ಪಿಕೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಷ್ಟೇ ಅಲ್ಲದೇ, ಉತ್ತರ ಪ್ರದೇಶದಂತೆಯೇ ಬಿಹಾರದಲ್ಲೂ ಮನರಂಜನಾ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಬಿಹಾರದ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಪಿಕೆ ಚಿತ್ರ ನೋಡದೇ ಇದ್ದರೂ ಸಹ ನಿತೀಶ್ ಕುಮಾರ್ ಸಲಹೆಯ ಮೇರೆಗೆ ಬಿಹಾರದಲ್ಲಿ ಪಿಕೆ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಮನರಂಜನಾ ತೆರಿಗೆ ವಿನಾಯಿತಿ ಘೋಷಿಸುವುದರಿಂದ ಬಡವರೂ ಸಹ ಅತ್ಯುತ್ತಮ ಮೌಲ್ಯಹೊಂದಿದ ಪಿಕೆ ಚಿತ್ರವನ್ನು ನೋಡಲು ಸಾಧ್ಯವಾಗುತ್ತದೆ ಎಂಬುದು ಬಿಹಾರ ಸರ್ಕಾರದ ನಿಲುವಾಗಿದೆ.

ಮಾಜಿ ಸಿ.ಎಂ ನಿತೀಶ್ ಕುಮಾರ್ ಪಿಕೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತಾವೂ ಚಿತ್ರವನ್ನು ನೋಡಲು ನಿರ್ಧರಿಸಿರುವುದಾಗಿ ಮಾಂಝಿ ಹೇಳಿದ್ದಾರೆ. ಅಲ್ಲದೇ ಪಿ.ಕೆ ಸಿನಿಮಾವನ್ನು ಕಡ್ಡಾಯವಾಗಿ ನೋಡಲೇಬೇಕಿರುವ ಸಿನಿಮಾ ಎಂದು ಮಾಂಝಿ ಅಭಿಪ್ರಾಯಪಟ್ಟಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Entertainment

  • ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ
  • ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ.
  • ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ
  • 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited