Untitled Document
Sign Up | Login    
Dynamic website and Portals
  
January 1, 2015

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ವೈ-ಫೈ

ಬೆಂಗಳೂರು : ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಚಿತ ವೈ-ಫೈ ಸೇವೆ ಯೋಜನೆ ಫೆಬ್ರವರಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಉಚಿತ ವೈ-ಫೈ ಯೋಜನೆಗೆ ರಾಜ್ಯದ 200 ಸ್ಥಳಗಳನ್ನು ಗುರುತಿಸಲಾಗಿದ್ದು, ಬೆಂಗಳೂರು ನಗರದಲ್ಲಿ 110 ಸ್ಥಳಗಳು ಹಾಗೂ ಪ್ರತಿ ಜಿಲ್ಲೆಯಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಉಚಿತ ವೈ-ಫೈ ಸೇವೆ ಯೋಜನೆಯನ್ನು ಅನುಷ್ಠಾನಗೊಳಿಸಲು ಇನ್ನೆರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ. ಫೆಬ್ರವರಿ ವೇಳೆಗೆ ಉಚಿತ ವೈ-ಫೈ ಸೇವೆ ಸಿಗಲಿದೆ ಎಂದು ತಿಳಿಸಿದರು.

ವೈ-ಫೈ ಸೇವೆಯನ್ನು ಒಬ್ಬರಿಗೆ ಮೂರು ತಾಸು ಸೀಮಿತಗೊಳಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಮೂರು ಕಡೆಗಳಂತೆ 90 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಸಿಗಲಿದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಚೇರಿ, ವಾಣಿಜ್ಯ ಕೇಂದ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಯೋಜನೆಗಾಗಿ ರಾಜ್ಯ ಸರ್ಕಾರ 4.5 ಕೋಟಿ ರೂ ಗಳನ್ನು ವೈ-ಫೈ ಒದಗಿಸುವ ಸಂಸ್ಥೆಗಳಿಗೆ ಅನುದಾನ ರೂಪದಲ್ಲಿ ನೀಡಲಿದ್ದು, ಈ ಹಣ ಮುಂದಿನ ನಾಲ್ಕು ವರ್ಷಗಳಲ್ಲಿ ವಾಪಸ್ ಆಗಲಿದೆ ಎಂದು ವಿವರಿಸಿದರು.

ಈಗಾಗಲೇ ಬೆಂಗಳೂರಿನ ಹದಿನಾಲ್ಕು ಕಡೆ ವೈ-ಫೈ ಸೇವೆ ಲಭ್ಯವಿದೆ. ಇಂಟರ್‌ನೆಟ್ ನಿಧಾನವಾಗುತ್ತಿದೆ. ಅದನ್ನು ಸುಧಾರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ವೈ-ಫೈ ಸೇವೆಯ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.

 

 

Share this page : 
 

Table 'bangalorewaves.bv_news_comments' doesn't exist