ನವದೆಹಲಿ : 'ಕೇಂದ್ರ ಸರ್ಕಾರ' ಅಡುಗೆ ಅನಿಲ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಸಬ್ಸಿಡಿಯೇತರ ಗ್ಯಾಸ್ ಸಿಲಿಂಡರ್ ದರವನ್ನು 43.50 ಪೈಸೆ ಇಳಿಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗಿರುವ ಪರಿಣಾಮ ಈ ಬೆಳವಣಿಗೆ ಕಂಡುಬಂದಿದ್ದು, ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ದರ ಇಳಿಕೆ ಜ.1ರಿಂದಲೇ ಜಾರಿಗೆ ಬರಲಿದ್ದು ಸತತ ಎರಡನೇ ಬಾರಿಗೆ ಸಬ್ಸಿಡಿ ರಹಿತ ಸಿಲಿಂಡರ್ ದರ ಇಳಿಕೆಯಾಗಿದೆ.
ಇದೇ ವೇಳೆ ಪೆಟ್ರೋಲ್, ಡಿಸೇಲ್ ದರ ಸಹ ಇಳಿಕೆಯಾಗುವ ಸಾಧ್ಯೆತೆ ಇದೆ. ಕಳೆದ 7ತಿಂಗಳಿನಿಂದ ಪೆಟ್ರೋಲ್, ಡಿಸೇಲ್ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ಇದೀಗ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಂತಸ ಉಂಟುಮಾಡಿದೆ.