Untitled Document
Sign Up | Login    
Dynamic website and Portals
  
December 22, 2014

ನವದೆಹಲಿಯಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ: ತಡವಾಗಿ ಸಂಚರಿಸಿದ ರೈಲು, ವಿಮಾನ

ನವದೆಹಲಿಯಲ್ಲಿ ಅತ್ಯಂತ  ಕನಿಷ್ಠ ಉಷ್ಣಾಂಶ: ತಡವಾಗಿ ಸಂಚರಿಸಿದ ರೈಲು, ವಿಮಾನ

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟನೆಯ ಮಂಜು ಮುಸುಕಿದ್ದ ಕಾರಣ 36ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿವೆ. ಅನೇಕ ರೈಲುಗಳೂ ಸಹ ತಡವಾಗಿ ಸಂಚರಿಸುತ್ತಿವೆ.

ಡಿ.22ರಂದು ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ 4.2 ಡಿಗ್ರಿ ಸೆ. ದಾಖಲಾಗಿದೆ. ಇದು ದೆಹಲಿಯಲ್ಲಿ ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿರುವ ದಿನವಾಗಿದೆ.

ಟಿವಿ ಮಾಧ್ಯಮಗಳ ವರದಿಗಳ ಪ್ರಕಾರ ಕನಿಷ್ಠ 50 ರೈಲುಗಳ ತಡವಾಗಿ ಹೊರಟಿವೆ. ಇದರಲ್ಲಿ ಈಶಾನ್ಯ ಎಕ್ಸ್‌ ಪ್ರೆಸ್‌ ಮತ್ತು ಮಹಾಬೋಧಿ ಎಕ್ಸ್‌ ಪ್ರೆಸ್‌ ಕೂಡ ಸೇರಿವೆ.

ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ದಿಲ್ಲಿ ಗರಿಷ್ಠ 16 ಡಿಗ್ರಿ ಸೆ. ಮತ್ತು ಕನಿಷ್ಣ 5 ಡಿಗ್ರಿ ಸೆ. ಉಷ್ಣಾಂಶ ಇರುವುದೆಂದು ಹೇಳಲಾಗಿದೆ. ಕಚೇರಿ, ಬ್ಯಾಂಕ್‌ ಮತ್ತಿತರ ಕಾರ್ಯಾಲಯಗಳಿಗೆ ಹೋಗುವವರಿಗೆ ದಿಲ್ಲಿಯಲ್ಲಿ ಮುಸುಕಿರುವ ಮಂಜು ಭಾರೀ ತೊಂದರೆ, ಅಡಚಣೆಗೆ ಕಾರಣವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Agriculture & Environment

ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
  • ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
  • ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅಮಳೆ ಅವಾಂತರಗಳಿಂದ ಸಂಭವಿಸಿದ ಅನಾಹುತಗಳಲ್ಲಿ ಏಳು ಜನರು ನೀರುಪಾಲಾಗಿದ್ದಾರೆ.
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬಿಹಾರ, ಒಡಿಶಾದಲ್ಲಿ ಚಂಡಮಾರುತ
  • ವರುಣನ ಅರ್ಭಟಕ್ಕೆ 8 ಜನರು ಬಲಿ: ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited