Untitled Document
Sign Up | Login    
Dynamic website and Portals
  
December 19, 2014

ಗೋವಾ ಮತಾಂತರ ಮುಕ್ತ ರಾಜ್ಯ: ಡಿ.ಸಿ.ಎಂ ಫ್ರಾನ್ಸಿಸ್ ಡಿಸೋಜ

ಗೋವಾ ಡಿಸಿಎಂ ಫ್ರಾನ್ಸಿಸ್ ಡಿಸೋಜ ಗೋವಾ ಡಿಸಿಎಂ ಫ್ರಾನ್ಸಿಸ್ ಡಿಸೋಜ

ಪಣಜಿ : 'ಗೋವಾ' ಮತಾಂತರ ಮುಕ್ತ ರಾಜ್ಯ ಎಂದು ಗೋವಾ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜ ಹೇಳಿದ್ದಾರೆ.

ಪಣಜಿಗೆ ಭೇಟಿ ನೀಡಿರುವ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾನ್ಸಿಸ್ ಡಿಸೋಜ, ಮರುಮತಾಂತರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಮರುಮತಾಂತರ ದೊಡ್ಡ ವಿಷಯವಲ್ಲ ಎಂದು ತಿಳಿಸಿದ್ದಾರೆ. ಗೋವಾ ಮತಾಂತರ ಮುಕ್ತ ರಾಜ್ಯವಾಗಿದ್ದು ಯಾವುದೇ ಒತ್ತಾಯಪೂರ್ವಕ ಮತಾಂತರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯವಿದೆ. ನಮಗೆ ಮತಾಂತರ ನಿಷೇಧ ಕಾಯ್ದೆ ಬೇಕಿಲ್ಲ ಎಂದು ಡಿಸೋಜ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಹಲವು ಕಾನೂನುಗಳಿದ್ದು ಮತ್ತೆ ಹೊಸ ಕಾನೂನು ಕಾರಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ತಾನು ಯಾವ ಧರ್ಮದಲ್ಲಿರಬೇಕೆಂಬುದು ಅವರ ವೈಯಕ್ತಿಕ ವಿಚಾರ, ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲ ಎಂದು ಫ್ರಾನ್ಸಿಸ್ ಡಿಸೋಜ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited