Untitled Document
Sign Up | Login    
Dynamic website and Portals
  
December 18, 2014

ಇಸ್ರೋದ ಮಹತ್ವಾಕಾಂಕ್ಷಿ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿ

ಇಸ್ರೋದ ಮಹತ್ವಾಕಾಂಕ್ಷಿ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ : 'ಇಸ್ರೋ' ತನ್ನ ಮಹತ್ವಾಕಾಂಕ್ಷೆಯ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಡಿ.18ರಂದು ಆಂಧ್ರ ಪ್ರದೇಶಶ್ರೀ ಹರಿಕೊಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡ್ಡಯನ ಕೇಂದ್ರದಲ್ಲಿ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಮಾನವ ಸಹಿತ ಬಾಹ್ಯಾಕಾಶಯಾನ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ಜಿ.ಎಸ್‌.ಎಲ್‌.ವಿ ಮಾರ್ಕ್ 3 ನೌಕೆ, ಇಸ್ರೋದ ಭವಿಷ್ಯದ ಮಾನವ ಸಹಿತ ಚಂದ್ರ ಮತ್ತು ಮಂಗಳಯಾನಕ್ಕೆ ಸಹಕಾರಿಯಾಗಲಿದೆ.

3650 ಕೆಜಿ ತೂಕದ ಜಿಎಲ್‌ವಿ ಮಾರ್ಕ್ 3 ಅತ್ಯಾಧುನಿಕ ರಾಕೆಟ್ ಆಗಿದ್ದು, 4 ಸಾವಿರ ಕೆಜಿ ತೂಕದ ಸ್ಪೇಸ್ ಕ್ಯಾಪ್ಸೂಲನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದೆ.

ಪ್ರಸ್ತುತ ಪ್ರಾಯೋಗಿಕ ಉಡಾವಣೆ ನಡೆದಿದ್ದು ಸುಮಾರು 126 ಕಿ.ಮೀ ಮಾತ್ರ ಸಂಚರಿಸಲಿದೆ. ರಾಕೆಟ್‌ ನಿಂದ ಕೇರ್ ಉಪಕರಣ ಬೇರ್ಪಟ್ಟು, ಬಂಗಾಳಕೊಲ್ಲಿಯಲ್ಲಿ ಬೀಳುವ ಇಡೀ ಪ್ರಕ್ರಿಯೆ 20-30 ನಿಮಿಷದಲ್ಲಿ ಮುಗಿದಿದೆ.

ರಾಕೆಟ್‌ ಗೆ 140 ಕೋಟಿ ರೂ. ವೆಚ್ಚವಾಗಿದ್ದರೆ, 'ಕೇರ್‌' ಸ್ಪೇಸ್‌ ಕ್ಯಾಪ್ಸೂಲ್‌ ಗೆ 15 ಕೋಟಿ ರೂ. ವೆಚ್ಚವಾಗಿದೆ.

ಇಸ್ರೋದ ಜಿ.ಎಸ್‌.ಎಲ್‌.ವಿ ಎಂ-3 ರಾಕೆಟ್‌ ಉಡಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೋದ ವಿಜ್ನಾನಿಗಳನ್ನು ಅಭಿನಂದಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited