Untitled Document
Sign Up | Login    
Dynamic website and Portals
  
December 10, 2014

ಲೈಸೆನ್ಸ್‌ ಇಲ್ಲದ ವೆಬ್‌ ಆಧರಿತ ಟ್ಯಾಕ್ಸಿ ನಿಷೇಧ: ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ರಾಜನಾಥ್ ಸಿಂಗ್

ನವದೆಹಲಿ : ದೆಹಲಿಯಲ್ಲಿ 'ಉಬರ್‌' ಕಂಪನಿಗೆ ಸೇರಿದ ಕ್ಯಾಬ್‌ ಚಾಲಕ ಯುವತಿ ಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಪರಿಣಾಮ ಇದೀಗ ಇಡೀ ದೇಶದ ಮೇಲಾಗಿದೆ. ಪ್ರಕರಣ ನಡೆದ ಸ್ಥಳವಾದ ದೆಹಲಿ ಮಾತ್ರವಲ್ಲದೆ ಎಲ್ಲಾ ರಾಜ್ಯಗಳಲ್ಲೂ ಲೈಸೆನ್ಸ್‌ ಹೊಂದಿರದ ವೆಬ್‌ ಆಧರಿತ ಟ್ಯಾಕ್ಸಿ ಸೇವೆಗಳನ್ನು ರಾಜ್ಯ ಸರ್ಕಾರಗಳು ನಿಷೇಧಿಸ ಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.

ಈ ಮೂಲಕ ಇತ್ತೀಚಿನಿಂದ ಜನಪ್ರಿಯವಾಗುತ್ತಿರುವ ಓಲಾ, ಟ್ಯಾಕ್ಸಿಫಾರ್‌ ಶೂರ್‌, ಮೇರು ಜೀನಿ ಮತ್ತಿತರ ಟ್ಯಾಕ್ಸಿಗಳ ಸೇವೆಯ ಮೇಲೆ ಕಡಿವಾಣ ಹಾಕುವ ಮುನ್ಸೂಚನೆ ನೀಡಿದೆ.

'ಲೈಸೆನ್ಸ್‌ ಹೊಂದಿರದ ಇಂಟರ್ನೆಟ್‌ ಆಧರಿತ ಟ್ಯಾಕ್ಸಿ ಸೇವೆಗಳನ್ನು ನಿರ್ಬಂಧಿಸಲು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆಯು ಸಲಹೆ ನೀಡುತ್ತದೆ' ಎಂದು ರಾಜ್ಯಸಭೆಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.

ಆದರೆ ಸರ್ಕಾರವು ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶ ಹೊಂದಿಲ್ಲ. ಸೇವೆಯನ್ನ ನಿಯಂತ್ರಿಸುವ ಉದ್ದೇಶವನ್ನಷ್ಟೇ ಹೊಂದಿದೆ. ಈ ವಿಚಾರದಲ್ಲಿ ಸರ್ಕಾರಕ್ಕೆ ಪ್ರಾಮಾಣಿಕ ಕಳಕಳಿ ಇದೆ. ಇದನ್ಯಾರೂ ಪ್ರಶ್ನೆ ಮಾಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ

ಈ ಮೊದಲು 'ರೇಡಿಯೊ ಟ್ಯಾಕ್ಸಿ' ಹೆಸರಿನಲ್ಲಿ 2006ರಲ್ಲಿ ಅನೇಕ ಟ್ಯಾಕ್ಸಿ ಕಂಪನಿಗಳು ಲೈಸೆನ್ಸ್‌ ಪಡೆದುಕೊಂಡವು. ಅವುಗಳ ಮೇಲೆ ಸಾಕಷ್ಟು ನಿರ್ಬಂಧಗಳು, ಷರತ್ತುಗಳಿದ್ದವು. ಆದರೆ ಈಗ ಹೊಸದಾಗಿ ಬರುತ್ತಿರುವ ಓಲಾ, ಉಬರ್‌ನಂಥ ಕಂಪನಿಗಳು 'ರೇಡಿಯೋ ಟ್ಯಾಕ್ಸಿ'ಗಳೇ ಅಲ್ಲ. ಅವು ಯಾವ ನಿಯಮವೂ ಅನ್ವಯವಾಗದ 'ಮಧ್ಯವರ್ತಿ ಕಂಪನಿ'ಗಳಂತೆ ವರ್ತಿಸುತ್ತಿವೆ ಎನ್ನಲಾಗಿದೆ. ಹೀಗಾಗಿ ಇವುಗಳ ಮೇಲೆ ನಿಯಂತ್ರಣ ಹೇರಲು ಸಾರಿಗೆ ನಿಯಮದಲ್ಲಿ ವ್ಯಾಪಕ ಬದಲಾವಣೆ ಅಗತ್ಯವಾಗಿದೆ.

2006ರಲ್ಲಿ ರೇಡಿಯೊ ಟ್ಯಾಕ್ಸಿ ಸೇವೆ ಜಾರಿಗೆ ಬಂದಾಗ ಟ್ಯಾಕ್ಸಿ ಕಂಪನಿ ಕನಿಷ್ಠ 500 ಸ್ವಂತ ಟ್ಯಾಕ್ಸಿ ಹೊಂದಿರಬೇಕು. ಪಾರ್ಕಿಂಗ್‌ ಸ್ಥಳ ಹೊಂದಿರಬೇಕು ಎಂಬ ನಿಯಮವಿತ್ತು.

ಆದರೆ ಈಗ ಓಲಾ, ಉಬರ್‌ನಂಥ ಕಂಪನಿಗಳು ಯಾವುದೇ ರೇಡಿಯೊ ಟ್ಯಾಕ್ಸಿ ಕಂಪನಿಗಳಲ್ಲ. ಈ ಕಂಪನಿಗಳು ಸ್ವಂತ ಕಾರು ಹೊಂದಿಲ್ಲ. ಹೀಗಾಗಿ ಕಾರು ಚಾಲಕರು ಮತ್ತು ಗ್ರಾಹಕರ ಮಧ್ಯೆ ಏನೇ ಗೊಂದಲವಾದರೂ ಅದಕ್ಕೆ ಕಂಪನಿ ಜವಾಬ್ದಾರಿಯಲ್ಲ ಎಂಬ ನಿಯಮ ಅಳವಡಿಸಿಕೊಂಡು ಚಾಲಕರ ದುರ್ವರ್ತನೆ ಪ್ರಕರಣದಲ್ಲಿ ಟ್ಯಾಕ್ಸಿ ಕಂಪನಿಗಳು ಬಚಾವಾಗುತ್ತವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited