Untitled Document
Sign Up | Login    
Dynamic website and Portals
  
December 7, 2014

ಜಿಸ್ಯಾಟ್-16 ಸಂವಹನ ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು : ಭಾರತದ ಬಾಹ್ಯಾಕಾಶ ಕೇಂದ್ರ ಇಸ್ರೋ ಮತ್ತೊಂದು ಸಾಧನೆಯತ್ತ ಹೆಜ್ಜೆಯಿಟ್ಟಿದೆ. ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-16 ಅನ್ನು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಇಸ್ರೋ, ಭಾರತದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಜಿಸ್ಯಾಟ್-16 ಸಹಾಯಕಾರಿಯಾಗಲಿದೆ ಎಂದು ತಿಳಿಸಿದೆ.

ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 2.10 ರಂದು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇದೀಗ ಉಪಗ್ರಹವು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಹಂತದಲ್ಲಿದೆ ಎಂದು ಇಸ್ರೋ ಟ್ವಿಟರ್‌ನಲ್ಲಿ ತಿಳಿಸಿದೆ.

ಯಶಸ್ವಿ ಉಡಾವಣೆಯ ಬಳಿಕ, ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಲಿಟಿಯು, ಜಿ-ಸ್ಯಾಟ್ 16 ಉಪಗ್ರಹ ಕಾರ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ನಾಳೆ ಮುಂಜಾನೆ 3.50ರ ಸಮಯದಲ್ಲಿ ಜಿಸ್ಯಾಟ್-16 ಉಪಗ್ರಹದ ಕಕ್ಷೆ ಬದಲಿಸಲು ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಲಿಟಿ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೋ ವಿವರಿಸಿದೆ.

ಪ್ರತಿಕೂಲ ಹವಾಮಾನ ಕಾರಣ ಜಿಸ್ಯಾಟ್-16 ಉಪಗ್ರಹ ಉಡಾವಣೆ ದಿನಾಂಕ ಮತ್ತು ಸಮಯವನ್ನು ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಇಂದು ಅನುಕೂಲ ವಾತಾವಣರದಂತೆ ನಿಗಧಿತ ಸಮಯಕ್ಕೆ ಉಪಗ್ರಹ ಉಡಾವಣೆ ಮಾಡಲಾಗಿದೆ.

3,181 ತೂಕದ ಜಿಸ್ಯಾಟ್-16, 48 ಸಂವಹನ ಟ್ರಾನ್ಸ್‌ಪಾಂಡರ್‌ಗಳನ್ನು ಹೊತ್ತು ಸಾಗಿದೆ. ಇಸ್ರೋ ಸಾಧನೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಸಂವಹನ ಸಾಧನೆಯಾಗಿದೆ.

ಇದೇ ವೇಳೆ ಜಿಸ್ಯಾಟ್-16 ಉಪಗ್ರಹದ ಯಶಸ್ವಿ ಉಡಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಭಾರತೀಯ ಬಾಹ್ಯಕಾಶ ಕಾರ್ಯದಲ್ಲಿ ಸಂವಹನ ಉಪಗ್ರಹ ಭಾರತದ ಕೊಡುಗೆಯಾಗಿ ಪರಿಣಮಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist