Untitled Document
Sign Up | Login    
Dynamic website and Portals
  
November 27, 2014

ವೇಗದ ಬೌನ್ಸರ್ ಗೆ ಬಲಿಯಾದ ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಫ್ ಹ್ಯೂಸ್

ಫಿಲಿಫ್ ಹ್ಯೂಸ್ ಫಿಲಿಫ್ ಹ್ಯೂಸ್

ಸಿಡ್ನಿ : 'ಶಫೀಲ್ಡ್ ಶೀಲ್ಡ್‌' ಗಾಗಿ ನಡೆಯುತ್ತಿದ್ದ ಪಂದ್ಯದ ವೇಳೆ ವೇಗದಲ್ಲಿ ಬಂದ ಬೌನ್ಸರ್ ಚೆಂಡು ತಲೆಗೆ ತಗುಲಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟಿಗ ಫಿಲಿಫ್ ಹ್ಯೂಸ್ ನ.27ರಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ನ.25ರಂದು ಹ್ಯೂಸ್ ತಲೆಗೆ ತೀವ್ರವಾದ ಗಾಯ ಉಂಟಾಗಿತ್ತು. ಕಳೆದ 2 ದಿನಗಳಿಂದ ಆತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ.

ತಲೆಗೆ ಪೆಟ್ಟುಬಿದ್ದ ಬೆನ್ನಲ್ಲೇ ಹ್ಯೂಸ್ ಅವರನ್ನು ಹೆಲಿಕಾಪ್ಟರ್ ಅಂಬುಲೆನ್ಸ್‌ನಲ್ಲಿ ಕೂಡಲೇ ಸೇಟ್ ವಿನ್ಸೆಂಟ್ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ಇವರು ಭಾರತದ ವಿರುದ್ಧ ನಡೆಯುವ ಮುಂದಿನ ಕ್ರಿಕೆಟ್ ಸರಣಿಗೆ ಹ್ಯೂಸ್ ಆಯ್ಕೆಯಾಗಬೇಕಿತ್ತು.

ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೌಥ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಆಡುತ್ತಿದ್ದ 25 ವರ್ಷದ ಹ್ಯೂಸ್ ಎದುರಾಳಿ ತಂಡದ ವೇಗದ ಬೌಲರ್ ಸೇನ್ ಅಬಾಟ್ ಎಸೆತದ ಲಯ ಅರಿಯದೇ ಹೋದರು. ಹೆಲ್ಮೆಟ್ ಧರಿಸಿದ್ದರೂ ಚೆಂಡು ತಲೆಯ ಬದಿಗೆ ಬಡಿದ ಪರಿಣಾಮ ಹ್ಯೂಸ ಸ್ಪಲ್ಪ ಹೊತ್ತಿನಲ್ಲೇ ಕುಸಿದು ಬಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited