ಬೆಂಗಳೂರು : 'ಕಿಸ್ ಆಫ್ ಲವ್' ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ವ ಭಾರತದ ಸಂಸ್ಕೃತಿಯಲ್ಲ ಎಂಬ ಹೇಳಿಕೆ ವ್ಯಾಪಕವಾಗಿ ಕೇಳುಬರುತ್ತಿರುವ ಬೆನ್ನಲ್ಲೇ ಆಂಧೋಲನದ ಆಯೋಜಕರು ಹೊಸ ಸಂಶೋಧನೆ ನಡೆಸಿದ್ದಾರೆ!
ಮುತ್ತು ಕೊಡುವ ಪ್ರಕ್ರಿಯೆ ಆರಂಭವಾಗಿದ್ದೇ ಭಾರತದಲ್ಲಿ ಎಂಬುದು ಕಿಸ್ ಆಫ್ ಲವ್ ಆಯೋಜಕರ ಹೊಸ ಸಂಶೋಧನೆ. ಮಹಾಭಾರತದಲ್ಲಿ ಮುತ್ತಿನ ಉಲ್ಲೇಖ ನೀಡಿರುವ ಕಿಸ್ ಆಫ್ ಲವ್ ಆಯೋಜಕರು, ಋಷ್ಯಶೃಂಗನು ವೈಶಾಲಿಗೆ ಮುತ್ತು ನೀಡಿದ ಕಥೆಯನ್ನು ಹೇಳತೊಡಗಿದ್ದಾರೆ. ಅಲ್ಲದೇ ಮಾನವಶಾಸ್ತ್ರಜ್ನರು ಭಾರತದಲ್ಲೇ ಮುತ್ತು ನೀಡುವ ಸಂಸ್ಕೃತಿ ಆರಂಭವಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
ಕಿಸ್ ಆಫ್ ಲವ್ ಕೇವಲ ಪ್ರೇಮಿಗಳಿಗೆ ಮಾತ್ರವಲ್ಲ. ನೈತಿಕ ಪೊಲೀಸ್ ಗಿರಿ ವಿರೋಧಿಸುವ ತಾಯಿ, ತಂದೆಯರು ಭಾಗವಹಿಸಬಹುದು. ಮಕ್ಕಳೊಂದಿಗೆ ಕುಟುಂಬ ಸಮೇತವಾಗಿಯೂ ಭಾಗವಹಿಸಿ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಎಂದು ಆಯೋಜಕರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ.