Untitled Document
Sign Up | Login    
Dynamic website and Portals
  
November 20, 2014

ರಾಜ್ಯದಲ್ಲಿ ನಿರ್ಮಾಣವಾಗಲಿದೆ 6 ಸ್ಮಾರ್ಟ್ ಸಿಟಿ

ಬೆಂಗಳೂರು : ಕೇಂದ್ರ ಸರ್ಕಾರದ 100 ಸ್ಮಾರ್ಟ್ ಸಿಟಿಗಳ ಯೋಜನೆಯಲ್ಲಿ ರಾಜ್ಯಕ್ಕೆ 6 ಸ್ಮಾರ್ಟ್ ಸಿಟಿಗಳ ಪಾಲು ಸಿಕ್ಕಿದೆ. ರಾಜ್ಯಕ್ಕೆ 8 ಸ್ಮಾರ್ಟ್ ಸಿಟಿಗಳನ್ನು ರೂಪಿಸುವ ಅವಕಾಶವಿತ್ತಾದರೂ, ಜನಸಂಖ್ಯೆ ಆಧಾರಿತವಾಗಿ 6 ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಪ್ರಕಾರ ಐದರಿಂದ ಹತ್ತು ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿಗಳನ್ನಾಗಿ ಮಾಡಬಹುದಾಗಿದೆ. ಪ್ರತಿಯೊಂದು ಸ್ಮಾರ್ಟ್ ಸಿಟಿಗೂ 500 ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆ, 24 ಗಂಟೆ ವಿದ್ಯುತ್, ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಇರುತ್ತದೆ ಎಂದರು.

ಆದರೆ ಕೇಂದ್ರ, ರಾಜ್ಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಬೆಂಬಲದಿಂದ ಸ್ಥಾಪಿಸಬೇಕೇ ಅಥವಾ ಪಿಪಿಪಿ ಮಾದರಿಯಲ್ಲಿ ರೂಪಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಯೋಜನೆ ಜಾರಿಗೆ ಸರ್ಕಾರ ಸಿದ್ಧವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅವರು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ ಎಂದು ತಿಳಿಸಿದರು.

ನಗರಗಳ ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ಪರ್ಯಾಯ ನಗರಗಳ ರೂಪಿಸುವುದು ಅಗತ್ಯ ಎಂಬುದು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸೂತ್ರಗಳು ಹೇಳುತ್ತವೆ. ಹೀಗಾಗಿ 50 ಲಕ್ಷ ಜನಸಂಖ್ಯೆ ಮೀರಿದ ನಗರಗಳಲ್ಲಿ ಪರ್ಯಾಯ ನಗರಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಈ ಪ್ರಕಾರ ಮೂರು ಹೊಸ ಸ್ಯಾಟ್ ಲೈಟ್ ಟೌನ್‌ಗಳ ಆರಂಭಕ್ಕೆ ಶಿಫಾರಸು ಮಾಡಿದ್ದೇವೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ಹಾಗೂ ಸ್ಯಾಟಲೈಟ್ ಟೌನ್‌ಗಳಲ್ಲಿ ತಂತ್ರಜ್ಞಾನ ಅಬಿವೃದ್ಧಿಪಡಿಸುವ ಸಂಬಂಧ ಐಐಟಿ ಜತೆ ಸರ್ಕಾರ ಮಾತುಕತೆ ನಡೆಸಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ಆಡಳಿತ ಇದುವರೆಗೆ ನಗರಾಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುತ್ತಿತ್ತು. ಆದರೆ ಇನ್ನು ಮುಂದೆ ಇದರ ಆಡಳಿತಕ್ಕಾಗಿಯೇ ಪ್ರತ್ಯೇಕ ಕಮಿಷನರೇಟ್ ಆರಂಭಿಸುವುದಾಗಿ ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited