Untitled Document
Sign Up | Login    
Dynamic website and Portals
  
November 17, 2014

ಪಾಕ್ ನಿಂದ ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿ ಯಶ್ವಸ್ವಿ ಉಡ್ಡಯನ

ಇಸ್ಲಾಮಾಬಾದ್ : ಎರಡು ದಿನಗಳ ಹಿಂದಷ್ಟೇ ಭಾರತದ ಹಲವು ನಗರಗಳನ್ನು ಗುರಿ ಇರಿಸಿ ಧ್ವಂಸಗೊಳಿಸಬಲ್ಲ ಅಣ್ವಸ್ತ್ರ ವಾಹಕ ಕ್ಷಿಪಣಿಗಳ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ ಕೈಗೊಂಡಿದ್ದ ಪಾಕಿಸ್ಥಾನ, ಈಗ ಮತ್ತೆ 900 ಕಿ.ಮೀ. ದೂರ ವ್ಯಾಪ್ತಿಯ ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿಯ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ.

ಶಹೀನ್‌ 1ಎ ಅಥವಾ ಹಫ್ತ್‌-4 ಖಂಡಾಂತರ ಅಣ್ವಸ್ತ್ರ ವಾಹಕ ಕ್ಷಿಪಣಿಯು ಹಲವಾರು ವಿನೂತನ ತಾಂತ್ರಿಕ ಸುಧಾರಣೆಗಳು ಹಾಗೂ ವಿವಿಧ ವಿನ್ಯಾಸಗಳ ಪುನರ್‌ ದೃಢೀಕರಣದ ಉದ್ದೇಶದೊಂದಿಗೆ ರೂಪಿಸಲ್ಪಟ್ಟಿದೆ. ಹಫ್ತ್‌-4 ಅಣ್ವಸ್ತ್ರ ವಾಹಕ ಕ್ಷಿಪಣಿಯ ಪರೀಕ್ಷಾ ಉಡ್ಡಯನವನ್ನು ದಕ್ಷಿಣ ಅರಬ್ಬೀ ಸಮುದ್ರದಲ್ಲಿನ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾಯಿಸಲಾಯಿತು ಎಂದು ಪಾಕ್ ಸೇನೆ ಹೇಳಿಕೊಂಡಿದೆ.

ಈ ಪರೀಕ್ಷಾ ಉಡ್ಡಯನದ ವೇಳೆ ಪಾಕ್‌ ನೌಕಾ ಪಡೆಯ ಮುಖ್ಯಸ್ಥ ಎಡ್ಮಿರಲ್‌ ಮುಹಮ್ಮದ್‌ ಝಕಾಉಲ್ಲಾ, ವ್ಯೂಹಾತ್ಮಕ ಯೋಜನಾ ವಿಭಾಗದ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಝಬೇರ್‌ ಮಹಮೂದ್‌ ಹಯಾದ್‌, ವ್ಯೂಹಾತ್ಮಕ ಸೇನಾ ಪಡೆ ಕಮಾಂಡರ್‌ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited