Untitled Document
Sign Up | Login    
Dynamic website and Portals
  
November 16, 2014

ದತ್ತುಪಡೆದ ಗ್ರಾಮಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ವಿಜಯವಾಡ : ಹಾಲಿ ರಾಜ್ಯ ಸಭಾ ಸದಸ್ಯ, ಕ್ರಿಕೆಟ್ ದೇವರು ಸಚಿನ್‌ ತೆಂಡುಲ್ಕರ್‌ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಪಡೆದಿರುವ ಆಂಧ್ರಪ್ರದೇಶದ ನೆಲ್ಲೂರಿನ ಪುಟ್ಟಮರಾಜ ಕಂಡ್ರಿಗ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಸವಲತ್ತುಗಳಿಂದ ವಂಚಿತವಾಗಿರುವ ಕುಗ್ರಾಮವಾಗಿರುವ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸುವುದಾಗಿ ಸಚಿನ್‌ ತಿಳಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿರುವ ಸಚಿನ್‌ ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಗ್ರಾಮದ ಅಭಿವೃದ್ದಿಗೆ ಸಂಸದರ ನಿಧಿಯಿಂದ ನಾಲ್ಕು ಕೋಟಿ ಅನುದಾನ ನೀಡಿದ್ದಾರೆ.

ಇದೇ ವೇಳೆ ಸಚಿನ್‌ ಗ್ರಾಮದ ರೈತರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

 

 

Share this page : 
 

Table 'bangalorewaves.bv_news_comments' doesn't exist