Untitled Document
Sign Up | Login    
Dynamic website and Portals
  
November 4, 2014

ಮಾದಕ ವಸ್ತು ಸೇವನೆ ತಡೆಗೆ ಸಾರ್ವಜನಿಕರ ಸಲಹೆ ಕೋರಿದ ಪ್ರಧಾನಿ ಮೋದಿ

ಮಾದಕ ವಸ್ತು ಸೇವನೆ ತಡೆಗೆ ಸಾರ್ವಜನಿಕರ ಸಲಹೆ ಕೋರಿದ ಪ್ರಧಾನಿ ಮೋದಿ

ನವದೆಹಲಿ : 'ಮಾದಕ ವಸ್ತು'(ಡ್ರಗ್ಸ್) ಸೇವನೆ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಡ್ರಗ್ಸ್ ಸೇವನೆ ತಡೆಗೆ ಸಲಹೆ ನೀಡಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ಪ್ರತಿ ತಿಂಗಳು ರೇಡಿಯೋದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಡ್ರಗ್ಸ್ ಸೇವನೆ ಕುರಿತು ಮಾತನಾಡುವಂತೆ ಸಾರ್ವಜನಿಕರು ತಮಗೆ ಸಲಹೆ ನೀಡಿದ್ದು, ತಮ್ಮ ಮುಂದಿನ ಕಾರ್ಯಕ್ರಮದಲ್ಲಿ ಡ್ರಗ್ಸ್ ಸೇವನೆ ಕುರಿತು ಮಾತನಾಡುವುದಾಗಿ ತಿಳಿಸಿದ್ದರು. ಈ ಕುರಿತು ಸಾರ್ವಜನಿಕರು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಈಗ ಮೋದಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಬ್ಲಾಗ್ ಒಂದನ್ನು ಆರಂಭಿಸಿದ್ದಾರೆ. ಆ ಮೂಲಕ ಎಲ್ಲಾ ಜನರೂ ಮಾದಕ ವ್ಯಸನ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ಹೇಳಿದ್ದಾರೆ.

ಮಾದಕ ಸೇವನೆ ಕುರಿತಂತೆ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ ನಿರ್ಮಾಣ ಮಾಡಿರುವ ನರೇಂದ್ರ ಮೋದಿ, ಆನ್‌ ಲೈನ್ ಮೂಲಕ ಬ್ಲಾಗ್ ಒಂದನ್ನು ಸೃಷ್ಟಿಸಿದ್ದು, ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಲು http://mygov.in/groupissue/tackling-the-drug-menace-in-india/show ಮೂಲಕ ಎನ್‌.ಜಿ.ಒಗಳು, ವ್ಯಸನಕ್ಕೆ ತುತ್ತಾದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited