BW News Bureau : ಪೆಟ್ರೋಲ್, ಡಿಸೇಲ್ ದರ ಇಳಿಕೆಯಿಂದ ನಿರಾಳರಾಗಿದ್ದ ಬೆಂಗಳೂರು ಜನತೆಗೆ ರಾಜ್ಯ ಸರ್ಕಾರ, ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದೆ.
ಜಲಮಂಡಳಿ ವಿದ್ಯುತ್ ದರ ಏರಿಕೆಯ ನಷ್ಟವನ್ನು ತುಂಬಿಸಿಕೊಳ್ಳಲು ನೀರಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶದಿಂದ ಗೃಹಪಯೋಗಿ ನೀರಿನ ದರ ಪ್ರತಿ 1 ಸಾವಿರ ಲೀ.ಗೆ 1 ರೂಪಾಯಿ ಹೆಚ್ಚಾಗಿದೆ. ಈ ಹಿಂದೆ ಪ್ರತಿ 1 ಸಾವಿರ ನೀರಿಗೆ ರೂ.6 ಇತ್ತು. ಹೊಸ ದರ ಪ್ರತಿ 1 ಸಾವಿರ ಲೀ. 7 ರೂ.ಗೆ ಏರಿಕೆಯಾಗಿದೆ.
ವಾಣಿಜ್ಯ ನೀರಿನ ದರದಲ್ಲೂ ಏರಿಕೆಯಾಗಿದೆ. ಈ ಹಿಂದೆ 1 ಸಾವಿರ ಲೀ.ಗೆ 36 ರೂಪಾಯಿ ಇದ್ದು, ಇದೀಗ ಪ್ರತಿ 1 ಸಾವಿರ ಲೀ ನೀರಿಗೆ 14 ರೂ ಹೆಚ್ಚಳ ಮಾಡಲಾಗಿದ್ದು, ಪ್ರತಿ 1 ಸಾವಿರ ಲೀ. 50 ರೂಪಾಯಿಗೆ ಏರಿಕೆ ಕಂಡಿದೆ.
ಕಾವೇರಿ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ನೂತನ ಪರಿಷ್ಕೃತ ದರ ಇಂದಿನಿಂದ ಜಾರಿಯಾಗಲಿದೆ.