Untitled Document
Sign Up | Login    
Dynamic website and Portals
  
October 30, 2014

ಭಾರತೀಯ ಮೀನುಗಾರರಿಗೆ ಗಲ್ಲುಶಿಕ್ಷೆ ನೀಡಿದ ಶ್ರೀಲಂಕಾ ಕೋರ್ಟ್

ಕೊಲಂಬೋ : 5 ಜನ ಭಾರತೀಯ ಮೀನುಗಾರರಿಗೆ ಶ್ರೀಲಂಕಾ ಹೈಕೋರ್ಟ್ ಗಲ್ಲುಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಮಾದಕ ವಸ್ತು ಕಳ್ಳಸಾಗಣೆ ಆರೋಪದಡಿ ಬಂಧಿಸಲಾಗಿದ್ದ ತಮಿಳುನಾಡಿನ ಐವರು ಮೀನುಗಾರರಿಗೆ ಶ್ರೀಲಂಕಾದ ಕೊಲಂಬೋ ಹೈಕೋರ್ಟ್ ಗಲ್ಲುಶಿಕ್ಷೆ ನೀಡಿದೆ.

2011ರ ನವೆಂಬರ್ ನಲ್ಲಿ ಮಾದಕ ದೃವ್ಯಗಳ ಕಳ್ಳಸಾಗಣೆ ಆರೋಪಡಿ ಶ್ರೀಲಂಕಾ ನೌಕಾಪಡೆ ಈ ಐವರು ಮೀನುಗಾರರನ್ನು ಬಂಧಿಸಿತ್ತು. ಕಳೆದ ಮೂರು ವರ್ಷಗಳಿಂದ ಶ್ರೀಲಂಕಾ ಜೈಲಿನಲ್ಲಿದ್ದ ಈ ಮೀನುಗಾರರಿಗೆ ಭಾರತದ ರಾಯಭಾರ ಕಛೇರಿಯಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ನಿಟ್ಟಿನಲ್ಲಿ ಕೊಲಂಬೋ ಹೈಕೋರ್ಟ್ ನ್ಯಾ.ಪದ್ಮಾ ಮೀನುಗಾರರಿಗೆ ಗಲ್ಲುಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ತೀರ್ಪು ಪ್ರಶ್ನಿಸಿ ಮೀನುಗಾರರು ನ.14ರೊಳಗೆ ಶ್ರೀಲಂಕಾ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಐವರು ಮೀನುಗಾರರು ತಮಿಳುನಾಡಿನ ರಾಮೇಶ್ವರಂ ಮೂಲದವರಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited