ಬೆಂಗಳೂರು : ಮಂಗಳಯಾನ ನೌಕೆಯ ಉಡ್ಡಯನದ ಮೊದಲ ಯತ್ನದಲ್ಲೇ ಯಶಸ್ವಿಯಾದ ಸಂತಸದಲ್ಲಿರುವ ಇಸ್ರೋ, ಮತ್ತೊಂದು ಮಂಗಳಯಾನಕ್ಕೆ ಸಜ್ಜಾಗುತ್ತಿದೆ.
2018ರಲ್ಲಿ ಮಂಗಳ ಕಕ್ಷೆಗೆ 2ನೇ ನೌಕೆ ಹಾರಿಸಲು ಯೋಜನೆ ರೂಪಿಸಲಗಿದೆ. ಲ್ಯಾಂಡರ್ ಆಂಡ್ ರೋವರ್ ಮೂಲಕ ಹೆಚ್ಚಿನ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ನಿರ್ದೇಶಕ ಎಸ್.ಶಿವಕುಮಾರ್ ತಿಳಿಸಿದ್ದಾರೆ.
ನಮ್ಮ ಸಧ್ಯದ ಗುರಿ ಜಿ.ಎಸ್.ಎಲ್.ವಿ ಮಾರ್ಕ್-3 ರಾಕೆಟ್ ನ ಉಡ್ಡಯನ. ಈ ಉಡ್ಡಯನ ಯಶಸ್ವಿಯಾದಲ್ಲಿ 2016ರಲ್ಲಿ ಚಂದ್ರಯಾನ-2 ಕೈಗೊಳ್ಳಲಾಗುತ್ತದೆ ಎಂದರು.
ಚಂದ್ರನ ಮೇಲೂ ಲ್ಯಾಂಡರ್ ಆಂಡ್ ರೋವರ್ ಕಳುಹಿಸಲಾಗುವುದು. ಒಂದು ಮಂಗಳಯಾನ ಉಡ್ಡಯನ ನಡೆಸಿದ 2 ವರ್ಷಗಳ ಬಳಿಕವಷ್ಟೇ ಮತ್ತೊಂದು ಉಡ್ಡಯನಕ್ಕೆ ಅನುಮತಿ ಇರುವುದರಿಂದ 2018 ಕ್ಕೆ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.