Untitled Document
Sign Up | Login    
Dynamic website and Portals
  
October 29, 2014

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡ ನಾಸಾ ರಾಕೆಟ್

ವಾಷಿಂಗ್ ಟನ್ : ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಅಮೆರಿಕಾದ ನಾಸ ಉಡಾವಣೆ ಮಾಡಿದ್ದ ರಾಕೆಟ್ ಸ್ಫೋಟಗೊಂಡಿದೆ.

ಅಮೆರಿಕಾದ ಪೂರ್ವ ವರ್ಜಿನಿಯಾದ ವಾಲ್ ಆಫ್ ಪ್ಲೈಟ್ ಫೆಸಿಲಿಟಿ ಉಡಾವಣಾ ಕ್ಷೇತ್ರದಿಂದ ಕೆಲ ಪರಿಕರಗಳನ್ನು ಹೊತ್ತೊಯ್ಯುವ ರಾಕೆಟ್ ವೊಂದನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ರಾಕೆಟ್ ಛಿದ್ರ ಛಿದ್ರವಾಗಿದೆ. ಸ್ಪೋಟಗೊಂಡ ರಾಕೆಟ್ ನಲ್ಲಿ 5,055 ಪೌಂಡ್‌ಗಳಷ್ಟು ತಾಂತ್ರಿಕ ಪರಿಕರಗಳನ್ನು ಇಡಲಾಗಿತ್ತು.

ಉಡಾವಣೆಗೂ ಮುನ್ನ ನಡೆಸಿದ ಪರೀಕ್ಷೆಯಲ್ಲಿ ರಾಕೆಟ್ ನಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿರಲಿಲ್ಲ. ಆದರೆ ಉಡಾವಣೆ ನಂತರ ಸ್ಪೋಟಗೊಂಡಿರುವುದು ನಾಸಾ ವಿಜ್ಞಾನಿಗಳು ಬೆಚ್ಚಿಬೀಳುವಂತೆ ಮಾಡಿದೆ. ಅಲ್ಲದೇ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ರಾಕೆಟ್ ಸ್ಫೋಟಗೊಂಡಿರುವುದು ವಿಜ್ಞಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಉಡಾವಣಾ ನಿಲ್ದಾಣದಲ್ಲೇ ರಾಕೆಟ್ ಸ್ಫೋಟಗೊಂಡಿದ್ದರಿಂದ ಉಡಾವಣಾ ಗೋಪುರದ ಸಿಬ್ಬಂದಿಗೂ ಅಪಾಯವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸಾವು-ನೋವು ಸಂಭವಿಸಿಲ್ಲ. ರಾಕೆಟ್ ಸ್ಫೋಟಗೊಳ್ಳಲು ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದ್ದು ಅ.29ರಂದು ತನಿಖೆ ಪ್ರಾರಂಭವಾಗಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಇದೇ ವಾಲ್ ಆಫ್ ಫ್ಲೈಟ್ ಫೆಸಿಲಿಟಿ ಉಡಾವಣಾ ಕೇಂದ್ರದಿಂದ ಮೊದಲ ಬಾರಿಗೆ ರಾಕೆಟ್ ಉಡಾವಣೆ ಮಾಡಲಾಗಿತ್ತು.

 

 

Share this page : 
 

Table 'bangalorewaves.bv_news_comments' doesn't exist