Untitled Document
Sign Up | Login    
Dynamic website and Portals
  
October 23, 2014

440 ಹೊಸ ಗ್ರಾಮ ಪಂಚಾಯತಿ ರಚನೆಗೆ ಸಮಿತಿ ಶಿಫಾರಸು

ಬೆಂಗಳೂರು : ಗ್ರಾಮ ಪಂಚಾಯತಿಗಳ ಪುನರ್ವಿಂಗಡಣಾ ಸಮಿತಿ ವರದಿ ಸಿದ್ಧಗೊಂಡಿದ್ದು, 440 ಹೊಸ ಗ್ರಾಮ ಪಂಚಾಯತಿ ರಚನೆಗೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.

ಎಸ್.ಐ.ನಂಜಯ್ಯಮಠ ಅವರ ನೇತೃತ್ವದ ಸಮಿತಿ ವರದಿ ಸಿದ್ಧಪಡಿಸಿದು, ಅ.28ರ ಬಳಿಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಈ ವರದಿ ಮಂಡನೆ ಮಾಡಲು ಚಿಂತನೆ ನಡೆಸಲಾಗಿದೆ.

ಬಯಲುಸೀಮೆಯಲ್ಲಿ 5-7 ಸಾವಿರ ಜನರಿಗೆ ಒಂದು ಗ್ರಾಮ ಪಂಚಾಯಿತಿ ಹಾಗೂ ಮಲೆನಾಡಿನಲ್ಲಿ 4 ಸಾವಿರ ಜನರಿಗೆ ಒಂದು ಗ್ರಾಮ ಪಂಚಾಯಿತಿ ರಚನೆ ಮಾಡಲು ಸಮಿತಿ ಸೂಚಿಸಿದ್ದು, ಹೊಸದಾಗಿ 440 ಗ್ರಾಮ ಪಂಚಾಯತಿ ರಚನೆಗೆ ಶಿಫಾರಸು ಮಾಡಲಿದೆ.

2011ರ ಜನಗಣತಿ ಆಧಾರದಲ್ಲಿ ಗ್ರಾಮ ಪಂಚಾಯತಿ ಪುರ್ವಿಂಗಡಣೆ ಮಾಡಲಾಗಿದ್ದು, ಈ ಮೂಲಕ ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳ ಸಂಖ್ಯೆ 6069ಕ್ಕೆ ಏರಿಕೆಯಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited