ಕೆನಡಾ : ಕೆನಡಾ ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಭಧ್ರತಾ ಪಡೆಯ ಯೋಧ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆನಡಾ ಪ್ರಧಾನಿ ಸ್ಟಿಫನ್ ಹಾರ್ಪರ್ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕೊಠಡಿಯ ಹೊರಗೆ ಈ ಗುಂಡಿನ ದಾಳಿ ನಡೆದಿದೆ. ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲಿ ಭದ್ರತಾ ಪಡೆ ಸಾವನ್ನಪ್ಪಿದ್ದಾನೆ.
ಆದರೆ ದಾಳಿ ನಡೆಸಿದ ಬಂದೂಕುಧಾರಿಯನ್ನು ಗುಂಡಿಕ್ಕಿ ಸಾಯಿಸಲಾಗಿದ್ದು, ಪ್ರಧಾನಿ ಹಾರ್ಪರ್ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಗುಂಡಿನ ದಾಳಿ ಹಿನ್ನಲೆಯಲ್ಲಿ ಸಂಸತ್ ಕಟ್ಟಡಕ್ಕೆ ಸದ್ಯ ಬೀಗ ಹಾಕಿದ್ದು, ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಬಾರಿ ಕೆನಡಾ ಮೇಲೆ ದಾಳಿ ನಡೆದಿದೆ. ಈ ದಾಳಿಯನ್ನು ಖಂಡಿಸಿದ ಹಾರ್ಪರ್ ನಾವು ಉಗ್ರರ ದಾಳಿಯನ್ನು ಸಹಿಸುವುದಿಲ್ಲ, ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.