Untitled Document
Sign Up | Login    
Dynamic website and Portals
  
October 21, 2014

ಕಪ್ಪುಹಣ ಹೊಂದಿರುವವರ ಹೆಸರು ಬಹಿರಂಗಗೊಳಿಸಿದರೆ ಕಾಂಗ್ರೆಸ್ ಗೆ ಮುಜುಗರ: ಜೇಟ್ಲಿ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ

ನವದೆಹಲಿ : 'ಕಪ್ಪುಹಣ' ಹೊಂದಿರುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಎನ್.ಡಿ.ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕಪ್ಪುಹಣದ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ, ಬಿಜೆಪಿ ಸರ್ಕಾರ ಶಾಶ್ವತವಾಗಿ ಕಪ್ಪುಹಣ ಹೊಂದಿರುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾವು ಖಾತೆದಾರರ ಹೆಸರನ್ನು ಬಹಿರಂಗಪಡಿಸಿದಲ್ಲಿ ಕಾಂಗ್ರೆಸ್ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರನ್ನು ಗೌಪ್ಯವಾಗಿಡುವುದಾಗಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು. ಇದನ್ನೇ ವಿಷಯವಾಗಿರಿಸಿಕೊಂಡ ಕಾಂಗ್ರೆಸ್ ನಾಯಕರು ಮೋದಿ ನೇತೃತ್ವದ ಸರ್ಕಾರ ಕಪ್ಪು ಹಣದ ಬಗ್ಗೆ ದೇಶದ ಜನತೆಗೆ ನೀಡಿದ ಭರವಸೆ ಈಡೇಸುವುದಿಲ್ಲ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಸರ್ಕಾರ ಖಾತೆದಾರರ ಹೆಸರು ಬಹಿರಂಗಪಡಿಸಿದರೆ, ಕಾಂಗ್ರೆಸ್ ಗೆ ಭರಿಸಲಾಗದ ಮುಜುಗರ ಉಂಟಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.

ದ್ವಿತೆರಿಗೆ ತಡೆ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದಾಗಿ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ಕಪ್ಪುಹಣ ಹೊಂದಿರುವವರ ಹೆಸರನ್ನು ಕೋರ್ಟ್ ಗೆ ತಿಳಿಸಿದರೆ ಸ್ವಾಭಾವಿಕವಾಗಿ ಅದು ಬಹಿರಂಗಗೊಳ್ಳುತ್ತದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಸುಖಾಸುಮ್ಮನೆ ಆರೋಪ ಮಾಡುತ್ತಿದೆ. ಕಪ್ಪುಹಣದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೇಳಿಕೆಗಳಿಗೆ ಸರ್ಕಾರ ಮಹತ್ವ ನೀಡುವುದಿಲ್ಲ ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited