ಕರಾಚಿ : ಕಾಶ್ಮೀರವನ್ನು ನಾವು ಭಾರತದಿಂದ ಕಸಿದುಕೊಳ್ಳಲಿದ್ದೇವೆ ಎಂಬ ಹೇಳಿಕೆ ನೀಡುವ ಮೂಲಕ ಪಿಪಿಪಿ ನಾಯಕ ಬಿಲಾವಲ್ ಭುಟ್ಟೋ ಮತ್ತೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದಾಗಲೆಲ್ಲ ಇಡೀ ಹಿಂದೂಸ್ತಾನ ಕಿರುಚಾಟ ಆರಂಭಿಸುತ್ತದೆ. ನಾನು ಮಾತನಾಡಲಾರಂಭಿಸಿದರೆ ಅವರು ನಿರುತ್ತರಾಗುತ್ತಾರೆ ಎಂಬುದು ಭಾರತೀಯರಿಗೆ ತಿಳಿದಿದೆ ಎಂದು ಬಿಲಾವಲ್ ತಿಳಿಸಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ. ಭಾರತ ಸರ್ಕಾರ ಮತ್ತು ಮಾಧ್ಯಮಗಳು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.