Untitled Document
Sign Up | Login    
Dynamic website and Portals
  
October 15, 2014

ಹಣದುಬ್ಬರ ದರ ಇಳಿಕೆ: 5 ವರ್ಷಗಳಲ್ಲಿ ದಾಖಲೆಯ ಕುಸಿತ

ನವದೆಹಲಿ : ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಸಗಟು ಮಾರಾಟ ಹಣದುಬ್ಬರ ಶೇ.2.38ಕ್ಕೆ ಇಳಿದಿದ್ದು ಜನಸಾಮಾನ್ಯರು ಕಳೆದ ಕೆಲವು ತಿಂಗಳಿನಿಂದ ಎದುರು ನೋಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನ್ ಕನಸು ಕೊನೆಗೂ ನನಸಾಗಿದೆ.

ಹಣದುಬ್ಬರ ಆಧರಿತ ಈ ಸಗಟು ದರ ಸೂಚ್ಯಂಕ ಸೆಪ್ಟೆಂಬರ್ ನಲ್ಲಿ ಶೇ.3.74ರಲ್ಲಿತ್ತು. ಕಳೆದ 3 ತಿಂಗಳಿನಿಂದ ಹಣದುಬ್ಬರ ದರ ಗಣನೀಯವಾಗಿ ಇಳಿಕೆಯಾಗುತ್ತಿರುವ ಬೆಳವಣಿಗೆ ಭಾರತದ ಅರ್ಥವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿರುವುದರ ಲಕ್ಷಣವಾಗಿದೆ. ಇಷ್ಟು ದಿನ ಹಣದುಬ್ಬರ ಏರಿಕೆಯಿಂದ ಬಡ್ಡಿದರ ಇಳಿಸಲು ಹಿಂದೇಟು ಹಾಕುತ್ತಿದ್ದ ಆರ್.ಬಿ.ಐ ಕೂಡ ತನ್ನ ನಿಲುವು ಬದಲಿಸುವ ಸಾಧ್ಯತೆಗಳಿವೆ.

ಇದೇ ವೇಳೆ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ದರ ಲೀಟರ್ ಗೆ 2.50 ರಷ್ಟು ಇಳಿಯುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸರಕು ದರ ಹಾಗೂ ಕಚ್ಚಾತೈಲ ದರ ಇಳಿಕೆಯಾಗಿರುವುದೂ ಸಹ ಹಣದುಬ್ಬರ ಕುಸಿತ ಕಾಣಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ತರಕಾರಿ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆಗಳೂ ಇಳಿಕೆಯಾಗಿರುವುದು ಗಮನಾರ್ಹವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Infrastructure

ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
  • ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಎನ್ ಜಿಟಿ ಅನುಮತಿ
  • ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಷರತ್ತುಬದ್ಧ ಅನುಮತಿಯನ್ನು ನೀಡಿದೆ.
  • ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಇಳಿಕೆ
  • ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited