ನವದೆಹಲಿ : ಮಾಜಿ ಕೇಂದ್ರ ಸಚಿವ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿಗೆ ಹೊಸ ತಿರುವು ದೊರೆತಿದೆ.
ಸುನಂದಾ ಪುಷ್ಕರ್ ಅವರ ದೇಹದಲ್ಲಿ ವಿಷದ ಅಂಶ ಇತ್ತು, ಹಾಗೂ ಅವರ ಮೃತ ದೇಹದ ಮೇಲೆ ಸೂಜಿಯಿಂದ ಚುಚ್ಚಿದ ಗಾಯ ಕಂಡುಬಂದಿದೆ ಎಂದು ಏಮ್ಸ್ ವೈದ್ಯರು ದೆಹಲಿ ಪೊಲೀಸರಿಗೆ ಅಂತಿಮ ವರದಿ ಸಲ್ಲಿಸಿದ್ದಾರೆ.
ಆಕೆಯ ಕಿಡ್ನಿ, ಪಿತ್ತಕೋಶ ಮತ್ತು ಹೃದಯದಲ್ಲಿ ವಿಷದ ಅಂಶ ಸೇರಿಕೊಂಡಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಡಾ. ಸುಧೀರ್ ಗುಪ್ತಾ ನೇತೃತ್ವದ ಏಮ್ಸ್ ಆಸ್ಪತ್ರೆಯ ಮೂರು ಜನ ವೈದ್ಯರ ತಂಡ ಪರೀಕ್ಷೆ ನಡೆಸಿ ವರದಿ ನೀಡಿದೆ. ವೈದ್ಯರ ವರದಿ ಮತ್ತು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಭಿಪ್ರಾಯ ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ.
ಪೊಲೀಸರು ಅಗತ್ಯ ಮಾಹಿತಿ ನೀಡಲು ವಿಳಂಬ ಮಾಡಿದ್ದಾರೆ. ಇದು ನಮ್ಮ ವೈದ್ಯಕೀಯ ಪರೀಕ್ಷೆಗೆ ಕೆಲವೊಂದು ಅಡ್ಡಿ ಉಂಟುಮಾಡಿತು ಎಂದು ವೈದ್ಯರ ತಂಡ ಆರೋಪಿಸಿದೆ. ಜ.17ರಂದು ಸುನಂದಾ ಆತ್ಮಹತ್ಯೆಗೆ ಶರಣಾಗಿದ್ದರು. ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿತ್ತು.