ಬರ್ದ್ವಾನ್ : ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬರ್ದ್ವಾನ್ ನಲ್ಲಿ ನಡೆದಿದೆ.
ಇಲ್ಲಿನ ಖಗ್ರಗರ್ ನ ಮನೆಯೊಂದರಲ್ಲಿ ಶಂಕಿತ ಉಗ್ರರು ಬಾಂಬ್ ತಯಾರಿಸುತ್ತಿದ್ದರು. ಈ ವೇಳೆ ಘಟನೆ ಸಂಬಂವಿಸಿದೆ. ಈ ಮನೆ ತೃಣಮೂಲ ಕಾಂಗ್ರೆಸ್ ನಾಯಕನಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಉಗ್ರರು ವಾಚ್ ಡಯಲ್, ಸಿಮ್ ಕಾರ್ಡ್ ಹಾಗೂ ಮತ್ತಿತರ ಸಾಧನ ಬಳಸಿ ಸುಧಾರಿತ ಸ್ಫೋಟಕ ಐಇಡಿ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಈ ವೇಳೆ ಓರ್ವ ಮೃತಪಟ್ಟರೆ ಇನ್ನಿಬ್ಬರು ಅಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ ಓರ್ವ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಆರ್ ಡಿಎಕ್ಸ್ ಸಮೇತ 55 ಐಇಡಿ, ಕೈಗಡಿಯಾರದ ಹಲವು ಡಯಲ್, ಮ್ಯಾಪ್, ಸಿಮ್ ಕಾರ್ಡ್, ಅಲ್ ಖೈದಾ ನಾಯಕ ಐಮನ್ ಅಲ್ ಜವಾಹಿರಿ ಹಾಗೂ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಅರ್ಧಂಬಂಧ ಸುಟ್ಟ ಕರಪತ್ರ, ಅರೆಬಿಕ್ ಪುಸ್ತಕಗಳು, ಜಿಹಾದಿ ಸಾಹಿತ್ಯಗಳು ಸಿಕ್ಕಿವೆ.