ನೈರೋಬಿ : 'ಆಫ್ರಿಕಾ' ಖಂಡದ ದೇಶಗಳಲ್ಲಿ ಬಿಜೆಪಿ ತನ್ನ ಕಚೇರಿಯನ್ನು ಆರಂಭಿಸುತ್ತಿದೆ. ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ಬಿಜೆಪಿ ಪಕ್ಷ ಆಫ್ರಿಕಾ ಖಂಡದಲ್ಲಿರುವ ದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಕಚೇರಿಗಳನ್ನು ಆರಭಿಸಲು ಮುಂದಾಗಿದೆ.
ಮುಂದಿನ 15ದಿನಗಳಲ್ಲಿ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಪಕ್ಷದ ಕಚೇರಿ ಆರಂಭಗೊಳ್ಳಲಿದೆ. ಈಗಾಗಲೇ ಕೆನಡಾ, ಡೆನ್ ಮಾರ್ಕ್, ಉಗಾಂಡದಲ್ಲಿ ಬಿಜೆಪಿ ಕಚೇರಿಯನ್ನು ಆರಂಭಿಸಿದೆ. ಈಶಾನ್ಯ ಆಫ್ರಿಕಾದ ಹಲವು ಭಾಗಗಳಲ್ಲಿ ಬಿಜೆಪಿ ತನ್ನ ಪಕ್ಷದ ಕಚೇರಿಯನ್ನು ಆರಂಭಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಆಫ್ರಿಕಾ ಖಂಡದಲ್ಲಿನ ಭಾರತೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಭಾರತ ಸರ್ಕಾರಕ್ಕೆ ಮಾಹಿತಿ ವಿನಿಮಯ ಮಾಡುವುದು ಬಿಜೆಪಿ ಕಚೇರಿ ಉದ್ಘಾಟನೆ ಮಾಡುವ ಉದ್ದೇಶವಾಗಿದೆ ಎಂದು ಓವರ್ ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ ಅಧ್ಯಕ್ಷ ವಿಮಲ್ ಚಂದ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ದಕ್ಷಿಣ ಆಫ್ರಿಕಾ ಅಭಿವೃದ್ಧಿ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದಾರೆ. ಈ ಯೋಜನೆಗೂ ಸಹ ಆಫ್ರಿಕಾದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಬಿಜೆಪಿ ಕಚೇರಿ ಸಹಕಾರಿಯಾಗಲಿದೆ.