Untitled Document
Sign Up | Login    
Dynamic website and Portals
  
September 5, 2014

ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಮುಲ್ಲಾಗಳಿಂದ ಇಮ್ರಾನ ಪ್ರಕರಣ ನೆನಪಿಸುವ ಫತ್ವಾ ಜಾರಿ!

ಲಖ್ನೌ : 2007ರಲ್ಲಿ ಮಾವನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಇಮ್ರಾನ ಪ್ರಕರಣವನ್ನು ನೆನಪಿಸುವವಂತದ್ದೇ ಮತ್ತೊಂದು ಹೇಯ ಕೃತ್ಯ ಉತ್ತರ ಪ್ರದೇಶಮುಜಫರ್ ನಗರದಲ್ಲಿ ನಡೆದಿದೆ.

ಮುಜಫರ್ ನಗರದಲ್ಲಿ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಮಹಿಳೆ ಇನ್ನು ಮುಂದೆ ತನ್ನ ಗಂಡನನ್ನು ತನ್ನ ಮಗನಂತೆ ಕಂಡು, ತನ್ನ ಮಾವನನ್ನು ಮದುವೆಯಾಗಬೇಕೆಂದು ಸ್ಥಳೀಯ ಮುಲ್ಲಾಗಳು ಫತ್ವಾ ಹೊರಡಿಸಿದ್ದಾರೆ. ಫತ್ವಾಗಳಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ಆದೇಶ ನೀಡಿದ್ದರೂ ಉತ್ತರ ಪ್ರದೇಶದಲ್ಲಿ ಇಮ್ರಾನ ಪ್ರಕರಣದಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಗಮನಾರ್ಹ.

28 ವರ್ಷದ ಮಹಿಳೆಯೋರ್ವಳ ಮೇಲೆ ಗಂಡನ ತಂದೆಯೇ ಅತ್ಯಾಚಾರ ನಡೆಸಿ ಇದನ್ನು ಬಹಿರಂಗಗೊಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಗಂಡ 2013ರಿಂದ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಆಕೆಯ ಮಾವನೇ ಸೊಸೆ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಗಂಡನಿಗೆ ತಿಳಿಸಿದರೂ, ಆತ ಆರೋಪವನ್ನು ತಳ್ಳಿಹಾಕಿ ತನ್ನ ತಂದೆಯ ವಿರುದ್ಧ ಪತ್ನಿ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಪ್ರತ್ಯಾರೋಪ ಮಾಡಿದ್ದಾನೆ. ಅಂತಿಮವಾಗಿ ಆಕೆ ತವರಿನ ಸಹಾಯ ಪಡೆದು ಅತ್ಯಾಚಾರ ಎಸಗಿದ್ದ ಮಾವನ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನ ಮೊರೆ ಹೋಗಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮ ಅವರಿಗೆ ಮಾವನ ವಿರುದ್ಧ ಕ್ರಮ ಜರುಗಿಸಿ, ಗರ್ಭಪಾತ ಮಾಡಲು ಅನುಮತಿ ನೀಡಬೇಕೆಂದು ಅತ್ಯಾಚಾರಕ್ಕೊಳಗಾದ ಮಹಿಳೆ ಮನವಿ ಮಾಡಿದ್ದಾರೆ. ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಸ್ಥಳೀಯ ಮುಲ್ಲಾಗಳು ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆ ಇನ್ನು ಮುಂದೆ ತನ್ನ ಗಂಡನನ್ನು ತನ್ನ ಮಗನಂತೆ ಕಂಡು, ತನ್ನ ಮಾವನನ್ನು ಮದುವೆಯಾಗಬೇಕೆಂದು ಫತ್ವಾ ಹೊರಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಲ್ಲಾಗಳು ಷರಿಯತ್ ಕಾನೂನಿನ ಪ್ರಕಾರ ತೀರ್ಪು ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.

2007ರಲ್ಲಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ತನ್ನ ಗಂಡನ ತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಇಮ್ರಾನಾ ಎಂಬ ಮುಸ್ಲಿಂ ಮಹಿಳೆ ಇನ್ನು ಮುಂದೆ ತನ್ನ ಗಂಡನನ್ನು ತನ್ನ ಮಗನಂತೆ ಕಂಡು, ತನ್ನ ಮಾವನನ್ನು ಮದುವೆಯಾಗಬೇಕೆಂದು ದೇವ್‌ಬಂದ್‌ನ ದಾರ್-ಉಲ್-ಉಲೂಮ್ ಫತ್ವಾ ಹೊರಡಿಸಿತ್ತು. ಆದರೆ ಷರಿಯತ್ ಕೋರ್ಟ್ ಗಳು ಕಾನೂನು ಮಾನ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿರುವ ನಂತರವೂ ಇಂತದ್ದೇ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited