Untitled Document
Sign Up | Login    
Dynamic website and Portals
  
September 2, 2014

ಜಪಾನ್ ವಿದ್ಯಾರ್ಥಿಗಳಿಗೆ ಭಾರತೀಯ ತತ್ವ ಬೋಧಿಸಿದ ಮೋದಿ !

ಜಪಾನ್ ನಲ್ಲಿ ಪ್ರಧಾನಿ ಮೋದಿ ಜಪಾನ್ ನಲ್ಲಿ ಪ್ರಧಾನಿ ಮೋದಿ

ಟೋಕಿಯೋ : ಜಪಾನ್ ನ 136 ವರ್ಷ ಹಳೆಯ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಪೌರಾಣಿಕ ಇತಿಹಾಸದ ಬಗ್ಗೆ ತಿಳಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಸೆ.2ರಂದು ಜಪಾನ್ ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಭಾರತೀಯ ತತ್ವಗಳಿಗೆ ಸಂಬಂಧಿಸಿದ ಬಗ್ಗೆ ಪಾಠ ಮಾಡಿದ್ದಾರೆ!

ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೊಂದುತ್ತಿರುವ ರಾಷ್ಟ್ರವಾಗಿದ್ದು ಆಧುನಿಕತೆ ಜೊತೆಜೊತೆಗೇ ಪರಿಸರ ಸಂರಕ್ಷಿಸಲು ಹೇಗೆ ಸಾಧ್ಯ ಎಂಬ ವಿವಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಭಾರತ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕನೂ ಪ್ರಕೃತಿಯನ್ನು ಪ್ರೀತಿಸಿ ಅದರೊಂದಿಗೆ ಸಂವಹಿಸಲು ಇಚ್ಛಿಸುತ್ತಾನೆ.

ಭಾರತದಲ್ಲಿ ಪ್ರಕೃತಿಯನ್ನು ದೇವರಂತೆ ಪೂಜಿಸಲಾಗುತ್ತದೆ. ನದಿ, ಭೂಮಿಯನ್ನು ತಾಯಿಯಾಗಿ, ಚಂದ್ರನನ್ನು ಮಾಮಾ(ತಾಯಿಯ ಸಹೋದರ)ನಂತೆ, ಸೂರ್ಯ ಹಾಗೂ ಹಿಮಾಲಯ ಪರ್ವತಗಳಾನ್ನು ಪಿತಾಮಹರಂತೆ, ಮರಗಳನ್ನು ದೇವರಂತೆ ಪೂಜಿಸಲಾಗುತ್ತದೆ ಎಂದಿದ್ದಾರೆ.

ಪ್ರಕೃತಿಯನ್ನು ದೈವದಂತೆ ಪೂಜಿಸುವುದರಿಂದ ಭಾರತೀಯರು ಪರಿಸರಕ್ಕೆ ಹಾನಿ ಉಂಟುಮಾಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಹವಾಮಾನ ಬದಲಾವಣೆ ಎಂಬ ಪರಿಭಾಷೆಯ ಬಗ್ಗೆಯೂ ಪ್ರಶ್ನಿಸಿದ ಮೋದಿ, ಹವಾಮಾನ ಬದಲಾಗುತ್ತಿಲ್ಲ ಬದಲಾಗುತ್ತಿರುವುದು ನಮ್ಮ ಅಭ್ಯಾಸಗಳು ಇದರಿಂದಾಗಿ ಪ್ರಕೃತಿಯೊಂದಿಗೆ ಮನುಷ್ಯ ಯುದ್ಧ ನಡೆಸುತ್ತಿದ್ದಾನೆ. ನಾವು ಪ್ರಕೃತಿಯೊಂದಿಗೆ ನಡೆಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ತಾವು ಬರೆದಿರುವ 'Convenient Action' on climate ಎಂಬ ಪುಸ್ತಕವನ್ನು ಓದುವಂತೆ ವಿದ್ಯಾರ್ಥಿಗಳಿಗೆ ಮೋದಿ ಸಲಹೆ ನೀಡಿದ್ದಾರೆ.

ಜಪಾನ್ ವಿದ್ಯಾರ್ಥಿನಿಯರೊಂದಿಗೆ ಭಾರತದಲ್ಲಿ ಮಹಿಳೆಯರ ಬಗೆಗಿನ ಸ್ಥಾನಮಾನಗಳ ಕುರಿತು ಮಾತನಾಡಿರುವ ಮೋದಿ, ಮಹಿಳೆಯರನ್ನು ವಿವಿಧ ರೂಪದಲ್ಲಿ ದೇವತೆಗಳಂತೆ ಪೂಜಿಸುತ್ತಾರೆ. ಮಹಿಳೆಯರ ಸ್ವರೂಪದಲ್ಲಿ ದೇವರನ್ನು ಆರಾಧಿಸುವ ಏಕೈಕ ದೇಶವೆಂದರೆ ಅದು ಭಾರತ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸರಸ್ವತಿ ರೂಪದಲ್ಲಿ ವಿದ್ಯಾದೇವತೆ, ಆರ್ಥಿಕತೆಗಾಗಿ ಲಕ್ಷ್ಮಿ, ರಕ್ಷಣೆಗಾಗಿ ಮಹಾಕಾಳಿಯನ್ನು, ಆಹಾರಕ್ಕಾಗಿ ಅನ್ನಪೂರ್ಣೇಶ್ವರಿಯನ್ನು ಮಹಿಳಾ ಸ್ವರೂಪದಲ್ಲಿ ಪೂಜಿಸಲಾಗುತ್ತದೆ ಎಂದು ಮೋದಿ ಜಪಾನ್ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited