Untitled Document
Sign Up | Login    
Dynamic website and Portals
  
September 2, 2014

ಮಾಜಿ ಕೇಂದ್ರ ಸಚಿವ ಎಂ.ಕೆ ಅಳಗಿರಿಗೆ ಜಾಮೀನು

ಮಾಜಿ ಕೇಂದ್ರ ಸಚಿವ ಎಂ.ಕೆ ಅಳಗಿರಿ ಮಾಜಿ ಕೇಂದ್ರ ಸಚಿವ ಎಂ.ಕೆ ಅಳಗಿರಿ

ಚೆನ್ನೈ : 'ಭೂಕಬಳಿಕೆ' ಆರೋಪ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಎಂ.ಕೆ ಅಳಗಿರಿಗೆ ಮಧುರೈ ಹೈಕೋರ್ಟ್ ಸೆ.2ರಂದು ಜಾಮೀನು ನೀಡಿದೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಎಂ.ಕೆ ಅಳಗಿರಿ ದೇವಸ್ಥಾನಕ್ಕೆ ಸೇರಬೇಕಾಗಿದ್ದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಾಲೇಜು ನಿರ್ಮಾಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಭೂಕಬಳಿಕೆ ಮಾಡಿರುವ ಆರೋಪದ ಮೇಲೆ ಕರಣಾನಿಧಿ ಪುತ್ರ ಎಂ.ಕೆ ಅಳಗಿರಿ ವಿರುಧ್ಧ ಮಧುರೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮುಂದೆ ಖುದ್ದು ಹಾಜರಾದ ಅಳಗಿರಿ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಮಧುರೈ ಕೋರ್ಟ್ ಅಳಗಿರಿಗೆ ಬುಧವಾರದ ವರೆಗೂ ಜಾಮೀನು ನೀಡಿದೆ.

ಮಧುರೈ ಜಿಲ್ಲಾ ರೈತರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ರಾಮಲಿಂಗಂ ಎಂಬುವವರು ಅಳಗಿರಿ ವಿರುದ್ಧ ದೂರು ದಾಖಲಿಸಿದ್ದರು. ದೇವಸ್ಥಾನಕ್ಕೆ ಸೇರಬೇಕಾಗಿದ್ದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಅಳಗಿರಿ ಅವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಅಳಿಗಿರಿ ವಿರುದ್ಧ ಎಫ್‌.ಐ.ಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅಳಗಿರಿಗೆ ಜಾಮೀನು ನೀಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited