ಮುಂಬೈ : 'ನರೇಂದ್ರ ಮೋದಿ' ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಡಿಪಿ ದರ ಏರಿಕೆ ಕಂಡಿರುವುದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ ಸೆ.1ರಂದು 8000 ಅಂಕಗಳ ಗಡಿ ದಾಟಿ ದಾಖಲೆಯ ಏರಿಕೆ ಕಂಡಿದೆ. ನಿಫ್ಟಿ ಅಂಕ ಏರಿಕೆ ಐತಿಹಾಸಿಕ ದಾಖಲೆಯಾಗಿದೆ.
ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಕೂಡ 26,812.69 ಅಂಕಗಳ ಏರಿಕೆ ದಾಖಲಿಸಿದೆ. 2014-15 ನೇ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಅರ್ಥಿಕ ಬೆಳವಣಿಗೆ ಚೇತರಿಕೆ ಕಂಡಿರುವುದೇ ನಿಫ್ಟಿ ಮತ್ತು ಸೆನ್ಸೆಕ್ಸ್ನ ಅಂಕಗಳು ದಾಖಲೆಯ ಏರಿಕೆ ಕಾಣಲು ಸಾಧ್ಯವಾಗಿದೆ.
ಆ.29ರ ಸಂಜೆ ಘೋಷಣೆಯಾಗಿದ್ದ ಜಿಡಿಪಿ ದರ ಶೇ.5.7ಕ್ಕೆ ಏರಿಕೆಯಾಗಿತ್ತು. ಕಳೆದ 9 ತಿಂಗಳಲ್ಲಿ ಇದು ಹೆಚ್ಚಿನ ಬೆಳವಣಿಗೆಯಾಗಿದೆ. ನಿಫ್ಟಿ 8,018.65 ಅಂಕಗಳಲ್ಲಿ ವ್ಯವಹರಿಸತೊಡಗಿದೆ. ಏಶ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವುದು ಕೂಡ ನಿಫ್ಟಿ ಹಾಗೂ ಸೆನ್ಸೆಕ್ಸ್ ನ ಇಂದಿನ ದಾಖಲೆಯ ಎತ್ತರಕ್ಕೆ ಕಾರಣವಾಗಿದೆ.
26,812.69 ಅಂಕಗಳ ಏರಿಕೆ ಕಂಡಿರುವ ಸೆನ್ಸೆಕ್ಸ್ ಕಳೆದ ಆರು ದಿನಗಳ ವಹಿವಾಟಿನಲ್ಲಿ 323.96 ಅಂಕಗಳನ್ನು ಗಳಿಸಿರುವುದು ಗಮನಾರ್ಹ.