Untitled Document
Sign Up | Login    
Dynamic website and Portals
  
August 14, 2014

ಗಲ್ಫ್ ನಲ್ಲಿ ಭಾರತೀಯ ಮುಸ್ಲಿಮರನ್ನೂ ಹಿಂದೂಗಳೆಂದೇ ಗುರುತಿಸುತ್ತಾರೆ-ಗೋವಾ ಸಿ.ಎಂ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್

ಗೋವಾ : ಭಾರತೀಯರು ಯಾವುದೇ ಧರ್ಮದವರಾಗಿದ್ದರೂ ವಿದೇಶಗಳಲ್ಲಿ ಅವರನ್ನು ಹಿಂದೂಗಳೆಂದೇ ಗುರುತಿಸುತ್ತಾರೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಹಿಂದೂ ಎಂಬುದು ಭಾರತೀಯರೇತರರು ಭಾರತೀಯರನ್ನು ಗುರುತಿಸಲು ಉಪಯೋಗಿಸುವ ಶಬ್ಧವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯ ಮುಸ್ಲಿಮರನ್ನೂ ಸಹ ಹಿಂದೂಗಳೆಂದೇ ಗುರುತಿಸುತ್ತಾರೆ ಎಂದು ಗೋವಾ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪರಿಕ್ಕರ್ ಹೇಳಿದ್ದಾರೆ.

ಜಗತ್ತಿನ ಅನೇಕ ಭಾಗಗಳಲ್ಲಿ ಹಿಂದೂ ಎಂಬ ಪದವನ್ನು ಧರ್ಮಾತೀತವಾಗಿ ಉಪಯೋಗಿಸಲಾಗುತ್ತದೆ ಎಂಬ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೇದಗಳಲ್ಲಿ ಹಿಂದೂ ಎಂಬ ಪದವನ್ನು ಬಳಸಲಾಗಿಲ್ಲ. ಹಿಂದೂ ಎಂಬ ಪದವೇ ಇಲ್ಲ ಎಂದು ಕಾಂಗ್ರೆಸ್ ಸದಸ್ಯರು ಗದ್ದಲವೆಬ್ಬಿಸಿದ ಘಟನೆಯೂ ಮುಖ್ಯಮಂತ್ರಿ ಪರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಗೋವಾ ವಿಧಾನಸಭೆಯಲ್ಲಿ ನಡೆಯಿತು.

ಜು.25ರಂದು ಗೋವಾ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ, ಭಾರತ ಹಿಂದೂ ರಾಷ್ಟ್ರ, ತಾವೊಬ್ಬ ಹಿಂದೂ ಕ್ರಿಶ್ಚಿಯನ್ ಎಂದು ಹೇಳಿಕೆ ನೀಡಿದ್ದರು. ದೇಶಾದ್ಯಂತ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited