Untitled Document
Sign Up | Login    
Dynamic website and Portals
  
Home >> Movie Home >> Reviews >> ಆನೆ ಪಟಾಕಿ
Movie Review
ಆನೆ ಪಟಾಕಿ
ಟುಸ್ಸ್ ಪಟಾಕಿ
Rating :
Hero :
ಸ್ರಜನ್ ಲೋಕೆಶ್
Heroine :
ಪಾರ್ವತಿ ನಿರ್ಬಾಯ್
Other Cast :
ಪಾರ್ವತಿ ನಿರ್ಬಾಯ್,ಸ್ರಜನ್ ಲೋಕೆಶ್,ಜೈ ಜಗದೀಶ್, ವಿಜಯಲಕ್ಷಿ ಸಿಂಗ್, ಗೋಪಿ, ರಂಗಾಯಣ ರಘೂ,ಸಾಧು ಕೋಲಿಲ, ಭಾಸ್ಕರ್, ಮುಂತಾದವರು
Director :
ಶೇಕರ್ ಬಂಡಿಯಪ್ಪ
Music Director :
ಧರ್ಮ ವಿಶ್
Producer :
ಎಲ್.ರೂಪ ಸುರೇಶ್, ಸುರೇಶ್ ಕುಮಾರ್
Release Date :
17-05-2013
ಡಬ್ಬಲ್ ಮೀನಿಂಗ್ ಡೈಲಾಗ್ ಗಳನ್ನ ಇಟ್ಟುಕೊಂಡು ಒಂದಷ್ಟು ಮಂದಿ ಪರಿಚಿತ ಮುಖಗಳನ್ನು ಹಾಕಿಕೊಂಡು ಲೋ ಬಜೆಟ್ನಲ್ಲಿ ಸಿನಿಮಾ ಮಾಡುವುದು ಒಂದು ಕಲೆ. ಅದು ಎಲ್ಲರೂ ಮಾಡಿ ದಕ್ಕಿಸಿಕೊಳ್ಳಲಾಗುವುದಿಲ್ಲ. ’ನಮಗೇನು ಕಮ್ಮಿ ನಾವೂ ಅಂಹದೊಂದು ಡಬ್ಬಲ್ ಮೀನಿಂಗ್ ಸಿನಿಮಾ ಮಾಡುತ್ತೇವೆ’ ಎಂದು ಮಾಡಿರುವ ಸಿನಿಮಾವೇ ಆನೆ ಪಟಾಕಿ.

ಆದರೆ ನಿರ್ದೇಶಕ ಶೇಕರ್ ಬಂಡಿಯಪ್ಪನವರು ತಮ್ಮ ಕತೆಯಲ್ಲಿ ಏನಿದೆ..? ಏನಿಲ್ಲ..? ಏನು ಹೇಳ ಹೊರಟ್ಟಿದೀನಿ..? ಎಂಬ ಗೊಂದಲಗಳಿಗೆ ಬಿದ್ದು ದಿಢೀರ್ ಎಂದು ಸಿನಿಮಾ ಮಾಡಿದಂತೆ ತೋರುತ್ತದೆ.

ನಾಯಕನಾಗಬೇಕೆಂಬ ಆಸೆ ಹೊತ್ತು ಬಂದ ಬೆಸಗರಹಳ್ಳಿ ಭೈರೇಗೌಡನಿಗೆ ಅಲಿಯಾಸ್ ಆನೆ ಪಟಾಕಿಗೆ(ಸೃಜನ್) ನಾಯಕನಾಗಿ ಒಂದು ಛಾನ್ಸ್ ಕೊಟ್ಟಿರುವ ನಿರ್ದೇಶಕನ ಸಿನಮಾಗೆ ಬಾಂಬ್ ಬ್ಲಾಸ್ಟ್ ಮಾಡಿ ಕಲ್ಲು ಹಾಕುತ್ತಾನೆ. ಅದು ನಿಂತು ಹೋಗುತ್ತದೆ. ಅದರ ನಿರ್ಮಾಪಕರ(ಜೈಜಗದೀಶ್) ಮದುವೆ ವಾರ್ಷಿಕೋತ್ಸವಕ್ಕೆ ಆಕ್ಸಿಡೆಟಲಿ ಆನೆಪಟಾಕಿಗೂ ಆಹ್ವಾನ ಬರುತ್ತದೆ. ಅವನು ಹೋಗುತ್ತಾನೆ. ಅಲ್ಲಿಂದ ಒಂದೇ ಲೊಕೇಶನ್. ಅಲ್ಲಿಗೆ ಕನ್ನಡ ಚಿತ್ರರಂಗವೇ ಬಂದಿತೆಂಬಂತೆ ತೋರಿಸುತ್ತಾರೆ. ಎಲ್ಲವರ್ಗದ ಗಣ್ಯರೂ ಬಂದಿರುತ್ತಾರೆ. ನಾಯಕಿ(ಪಾರ್ವತಿ)ರಕ್ಷಿತಾ ಬಂದಿರುತ್ತಾಳೆ. ಹಾಗೆ ನಾಯಕ ಮತ್ತು ನಾಯಕಿಯ ನಡುವೆ ನಡೆಯುವ ಪ್ರೇಮ ಪುರಾಣದಲ್ಲಿ, ಅಲ್ಲಿಗೆ ಆಗಮಿಸಿರುವ ಗಣ್ಯರ ನಡುವಿನ ಕಾಮಿಡಿಯೇ ಆನೆ ಪಟಾಕಿ.

ಡಬ್ಬಲ್ ಮೀನಿಂಗ್ ಡೈಲಾಗ್ಗಳಿದೆ, ಸ್ವಾಮಿಜೀ(ಮಿಮಿಕ್ರಿ ದಯಾನಂದ್), ಸಾಧು, ರಂಗಾಯಣ ರಘು, ಹೀಗೆ ಕಾಮಿಡಿ ಕಲಾವಿದರ ಡಂಡಿದೆ. ಸೃಜನ್ ಮುಗ್ಧತೆ ಇದೆ. ಆದರೆ ನಿರ್ದೇಶಕರು ಎಲ್ಲವನ್ನು ಬಳಸಿಕೊಂಡು ಉತ್ತಮ ಚಿತ್ರ ಕೊಡುವ ಬದಲು, ಸೀರಿಯಲ್ ಸೀನ್ಗಳಂತೆ ಕಟ್ಟಿ ಅಲ್ಲಲ್ಲಿ ಮಾತ್ರ ನಗಿಸಿ ಕಣ್ಮರೆಯಾಗುತ್ತಾರೆ. ಸೃಜನ್ ಸೂಸೂ ಮಾಡುವ ಸೀನ್, ಅರ್ಧ ಸಿನಿಮಾವನ್ನು ತಿಂದು ಹಾಕುತ್ತದೆ. ಎಲ್ಲಾ ಕಲಾವಿದರು ಒಂದೇ ಸಮಸ್ಯೆಯನ್ನೇ ಸಿನಿಮಾ ಪೂರ್ತಿ ಅನುಭವಿಸುತ್ತಾರೆ. ಕತೆಯು ಅಲ್ಲಿ ಏಕತಾನೆ ಹೊಂದಿ, ನೋಡುಗನಿಗೆ ರಿಪಿಟ್ ಎನ್ನಿಸಿ, ಎಷ್ಟೊತ್ತಿಗೆ ಮುಗಿಸುತ್ತಾರೋ ಎನ್ನಿಸುತ್ತದೆ.

ಪ್ರಯಶಹ ನಿರ್ಮಾಪಕರು ಮತ್ತು ಸೃಜನ್ ಡೇಟ್ಸ್ ಸಿಕ್ಕ ತಕ್ಷಣ ಸಿನಿಮಾ ಮಾಡಿ ಮುಗಿಸುವ ಭರಾಟೆಯಲ್ಲಿ ಸಿನಿಮಾ ಮುಗಿಸಿದಂತೆ ಕಾಣುತ್ತದೆ. ಕತೆ ಮತ್ತು ನಿರೂಪಣೆಯಲ್ಲಿ ನಿರ್ದೇಶಕರು ಮತ್ತಷ್ಟು ಕೆಲಸ ಮಾಡಬಹುದಾಗಿತ್ತು. ಡೈಲಾಗ್ನಲ್ಲೂ ಕಾರಂತರಿಂದ ಉತ್ತಮ ಕೆಲಸ ತೆಗೆಯುವಲ್ಲಿ ವಿಪಲರಾಗಿದ್ದಾರೆ. ಸಂಗೀತದಲ್ಲಿ ಟೈಟಲ್ ಸಾಂಗ್ ಒಂದನ್ನು ಬಿಟ್ಟರೆ ಮತ್ಯಾವುದು ಮನಸ್ಸಿನಲ್ಲಿ ಉಳಿಯುವುದಿಲ್ಲ. ವಾಲಿ ತಮ್ಮ ಕೆಲಸ ತಾವು ಮಾಡಿದ್ದಾರೆ. ಸಾಂಗ್ ಕೋರಿಯೋಗ್ರಫಿ ಚೆನ್ನಾಗಿಲ್ಲ.

ಸೃಜನ್ ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಹೊಸ ನಾಯಕಿ ಪಾರ್ವತಿ ನಿರ್ಭಾಗ್ ತಕ್ಕ ಮಟ್ಟಿಗೆ ಅಭಿನಯಿಸಿ ತಮ್ಮ ಸುಂದರ ನಗುವಿನಲ್ಲೇ ಸಿನಿಮಾ ಮುಗಿಸಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರು ತಮಗೆ ಕೊಟ್ಟ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿ ತಮ್ಮ ಕೆಲಸ ಮುಗಿಸಿಕೊಂಡಿದ್ದಾರೆ.


ವರದಿ: ನಟರಾಜ್ ಎಸ್ ಭಟ್.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited